ಸುದ್ಧಿಕನ್ನಡ ವಾರ್ತೆ
ಶಿರಸಿ: ಕಳೆದ ಶನಿವಾರ ಮತ್ತು ಭಾನುವಾರ ದುಬೈ ಹಾಗೂ ಅಬುದಾಬಿಯಲ್ಲಿ ನಡೆದ ಯಕ್ಷಗಾನ ವೀರ ಬರ್ಭರಿಕ ಮತ್ತು ಭೀಷ್ಮ ವಿಜಯ ಪ್ರದರ್ಶನಗಳು ಯಶಸ್ವಿಯಾಗಿ ನೆರವೇರಿದವು.
ಯಕ್ಷಗಾನದ ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಗಾನ ಸುಧೆ ಹರಿಸಿದರು. ಮದ್ದಳೆಯಲ್ಲಿ ಸುನೀಲ ಭಂಡಾರಿ, ಚೆಂಡೆಯಲ್ಲಿ ಸುಜನ್ ಹಾಲಾಡಿ ಸಾಥ್ ನೀಡಿದರು. ಮುಮ್ಮೇಳದಲ್ಲಿ ಪ್ರಸನ್ನ ಶೆಟ್ಟಿಗಾರ್, ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪೂರ, ರವೀಂದ್ರ ದೇವಾಡಿಗ, ವಿನಯ ಬೇರೊಳ್ಳಿ, ಸಂತೋಷ್ ಕುಲಾಲ್, ಬೆಹರೀನ್ ಕಿರಣ ಉಪಾಧ್ಯಾಯ ಹಾಗೂ ಸ್ಥಳೀಯ ಕಲಾವಿದರು ಪಾತ್ರಗಳನ್ನು ಅಭಿನಯಿಸಿದರು.
ಈ ಯಶಸ್ವಿ ಕಾರ್ಯಕ್ರಮವನ್ನು ಶಿರಸಿ ಮೂಲದ ವಿನಾಯಕ ಹೆಗಡೆ, ಪ್ರಶಾಂತ ಭಟ್, ಹಾಗೂ ಗಣಪತಿ ಭಟ್ ಅವರ ಸಂಯೋಜನೆಯಲ್ಲಿ ಆಯೋಜಿಸಲಾಗಿತ್ತು.