ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಜೂನ್ 25 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆತ್ಮಾರಾಮ ಅಮ್ಮನಳ್ಳಿ ವಿರಚಿತ ಸತ್ಯವಾನ ಸಾವಿತ್ರಿ ತಾಳಮದ್ದಳೆ ಜರುಗಿತು.

ಹಿಮ್ಮೇಳದಲ್ಲಿ ಭಾಗವತರಾಗಿ  ವಿದ್ವಾನ್  ಗಣಪತಿ ಭಟ್ಟ, ಮದ್ದಳೆ ವಾದಕರಾಗಿ ಎ.ಪಿ.ಪಾಠಕ್ ಕಾರ್ಕಳ, ಅರ್ಥಧಾರಿಗಳಾಗಿ ಯಮನ ಪಾತ್ರದಲ್ಲಿ ವಿಶ್ವೇಶ್ವರ ಭಟ್ಟ ಸುಣ್ಣಂಬಳ, ಸತ್ಯವಾನನ ಪಾತ್ರದಲ್ಲಿ ದಿವಾಕರ ಹೆಗಡೆ ಕೆರೆಹೊಂಡ, ಸಾವಿತ್ರಿಯ ಪಾತ್ರದಲ್ಲಿ ವಾಸುದೇವ ರಂಗ ಭಟ್ಟ ಮಧೂರು, ಅಶ್ವಪತಿಯಾಗಿ ಮಹೇಶ ಭಟ್ಟ ಇಡಗುಂದಿ, ನಾರದನಾಗಿ ವಿನಾಯಕ  ಭಟ್ಟ ಶೇಡಿಮನೆ ರವರು ಅರ್ಥಧಾರಿಗಳಾಗಿ ಭಾಗವಹಿಸಿದ್ದರು. ಎಚ್.ಬಿ.ಬಾಯ್ಸ ಮಲವಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು. ತಾಳಮದ್ದಳೆ ಜನಮೆಚ್ಚುಗೆಗೆ ಪಾತ್ರವಾಯಿತು.