ಸುದ್ದಿಕನ್ನಡ ವಾರ್ತೆ
ಗೋಕರ್ಣ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಮಡಿದ ರಷ್ಯಾ ಯೋಧ ಸೆರ್ಗೆಯ್ ಗ್ರಾಬ್ಲೆವ್ ಗೆ (Russian soldier Sergei Grablev) ಮುಕ್ತಿ ಮತ್ತು ಸಿದ್ಧಿ ಕ್ಷೇತ್ರವೆಂದೇ ಖ್ಯಾತಿಯಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ದಲ್ಲಿ  (Gokarna in Uttara Kannada District) ಮೋಕ್ಷ ಕಾರ್ಯ ನೆರವೇರಿಸಲಾಯಿತು.

 

ಸೆರ್ಗೆಯ್ ಗ್ರಾಬ್ಲೆವೆಸ್ಕಿ ಒಬ್ಬ ರಷ್ಯಾದ ಸೈನಿಕ. ಏಪ್ರಿಲ್ 26 ರಂದು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಯುದ್ಧದಲ್ಲಿ ಅವರು ನಿಧನರಾದರು. (He died in the war) ಅವರ ಮೋಕ್ಷ ಕಾರ್ಯವನ್ನು ಗೋಕರ್ಣದಲ್ಲಿ ನೆರವೇರಿತು.

 

ಬುಧವಾರ, ಪುರೋಹಿತ ಪ್ರಶಾಂತ್ ಹಿರೇಗಂಗೆ ಗೋಕರ್ಣದ ಮಹಾಬಲೇಶ್ವರದಲ್ಲಿ ಗ್ರಾಬ್ಲೆವೆಸ್ಕಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ಸೆರ್ಗೆಯ್ ಗ್ರಾಬ್ಲೆವ್ ಭಾವಚಿತ್ರವನ್ನಿಟ್ಟು, ಶಾಸ್ತ್ರೋಕ್ತವಾಗಿ ನಾರಾಯಣ ಬಲಿ, ಪಿಂಡ ಪ್ರಧಾನ ಮತ್ತು ಇತರ ವೈದಿಕ ವಿಧಿಗಳನ್ನು ಪುರೋಹಿತ ಪ್ರಶಾಂತ ಹಿರೇಗಂಗೆ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಕಾರ್ಯವನ್ನು ಸೆರ್ಗಯ್ ಅವರ ಸಂಬಂಧಿಕರಾದ ಎಲಿನಾ ಆಯೋಜಿಸಿದ್ದರು. ರಷ್ಯಾದಲ್ಲಿರುವ ಸೆರ್ಗೆಯ್ ಅವರ ಕುಟುಂಬದವರು ಈ ಅಪರಕ್ರಿಯೆಯ ಕಾರ್ಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಿದರು. ಸೆರ್ಗೆಯ್ ಅವರ ಆತ್ಮಕ್ಕೆ ಮೋಕ್ಷ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿದರು.(Everyone prayed for the salvation of Sergei’s soul).

 

ಗೋಕರ್ಣದ ಸ್ಥಳೀಯರಿಗೆ, ಗ್ರಾಬ್ಲೆವೆಸ್ಕಿ ‘ಸೆರ್ಗೆಯ್ ಬಾಬಾ’ ಆಗಿದ್ದರು ಮತ್ತು ಅವರಿಗೆ ಅನೇಕ ಅನುಯಾಯಿಗಳಿದ್ದರು. ಅವರು ಭಾರತೀಯ ಸಂಸ್ಕøತಿ, ಸಂಪ್ರದಾಯ ಮತ್ತು ಸಮಾಜದಿಂದ ಪ್ರಭಾವಿತರಾಗಿದ್ದರು. ಇದು ಅವರನ್ನು ಗೋಕರ್ಣಕ್ಕೆ ಕರೆತಂದಿತು, ಅಲ್ಲಿ ಅವರು ಸಾಕಷ್ಟು ಸಮಯ ಕಳೆದರು. ಅವರು ಕೆಲವೊಮ್ಮೆ ವಾರಣಾಸಿಗೆ ಹೋಗುತ್ತಿದ್ದರು, ಅಲ್ಲಿ ಅವರು ಕೆಲವು ಕಾಲ ತಂಗಿದ್ದರು” ಎಂದು ಪುರೋಹಿತ ವಿನಾಯಕ ಶಾಸ್ತ್ರಿ ಮಾಹಿತಿ ನೀಡಿದರು.