ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಶ್ರೀಸಿದ್ಧಿವಿನಾಯಕ ದೇವಸ್ಥಾನ (ಗಂಟೆಗಣಪತಿ) ಚಂದಗುಳಿ ಶಿಖರ ಪ್ರತಿಷ್ಠಾಪಾ ಮಹೋತ್ಸವ ಫೆಬ್ರುವರಿ 28 ರಿಂದ ಮಾರ್ಚ 3 ರವರೆಗೆ ನಡೆಯಲಿದೆ.

ಗಂಟೆ ಗಣಪತಿ ದೇವಸ್ಥಾನದ ಶ್ರೀ ದೇವರ ಶಿಖರ ಪ್ರತಿಷ್ಠೆ, ಗುರುಭವನದ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಭಕ್ತಾದಿಗಳ ಅನುಕೂಲಕ್ಕಾಗಿ ಯಲ್ಲಾಪುರ ಬಸ್ ನಿಲ್ದಾಣದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಮಾರ್ಚ 1 ರಿಂದ 3 ರ ವರೆಗೆ ಪ್ರತಿದಿನ ಯಲ್ಲಾಪು-ಚಂದಗುಳಿ, ಚಂದಗುಳಿ-ಯಲ್ಲಾಪುರ(ನಂದೊಳ್ಳಿ-ಮಾಗೋಡು ಮೂಲಕ) ಮಾರ್ಗವಾಗಿ ಬೆಳಿಗ್ಗೆ 9 ಗಂಟೆಯಿಂದ ನಿರಂತರ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತಾದಿಗಳು ಈ ಬಸ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.