ಸುದ್ದಿಕನ್ನಡ ವಾರ್ತೆ
ಯಲ್ಲಾಪುರ: ರಾಜ್ಯದ ರಾಜಕೀಯದ ದೊಡ್ಡ ವಿಷಯಗಳ ಕುರಿತು ಪ್ರತಿಕ್ರಿಯೆ ನೀಡುವದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯೆ ನೀಡಿದರು.
ತಾಲೂಕಿನ ಬಿಸಲಕೊಪ್ಪ ಪಕ್ಕದ ಹುಡೇಲ್ ಕೊಪ್ಪದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರಕಾರದ ಭಾಗವಾಗಿ ಕೆಲಸ ಮಾಡುತ್ತೇವೆ. ಪಕ್ಷಗಳ, ರಾಜಕೀಯ, ಸರಕಾರದ ವಿದ್ಯಮಾನಗಳಿಗೆ ಪ್ರತಿಕ್ರಿಯೆ ನೀಡುವದಿಲ್ಲ ಎಂದರು.
ಬನವಾಸಿ ಕದಂಬೋತ್ಸವ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಈ ಬಗ್ಗೆ ತೆಗೆದುಕೊಂಡ ತೀರ್ಮಾನಕ್ಕೆ ಬದ್ದವಿದ್ದೇನೆ. ಪಂಪ ಪ್ರಶಸ್ತಿ ಈಗಾಗಲೇ ಬಿ.ಎ.ವಿವೇಕ ರೈ ಅವರಿಗೆ ಘೋಷಿಸಲಾಗಿದೆ. ಬನವಾಸಿಯಲ್ಲಿ ಕದಂಬೋತ್ಸವ ನಡೆಯಲೇಬೇಕು. ಪ್ರಶಸ್ತಿ ಪ್ರದಾನ ಅಲ್ಲೇ ಆಗಬೇಕು ಎಂದರು.
ಬನವಾಸಿಗೆ ಮಂಜೂರಾದ ಗ್ರಿಡ್ ನಿರೀಕ್ಷೆಯಂತೆ ನಡೆದರೆ ಇನ್ನೆರಡು ತಿಂಗಳಲ್ಲಿ ಪೂರ್ಣವಾಗಲಿದೆ. ಉತ್ತರ ಕನ್ನಡದಲ್ಲಿ ಮೂರು, ಶಿವಮೊಗ್ಗದಲ್ಲಿ ೧೦ ಕಂಬ ನಿರ್ಮಾಣಕ್ಕೆ ತೊಡಕಿತ್ತು. ಪರಿಹಾರ ಹೆಚ್ಚಳದ ಬೇಡಿಕೆ ಶಿವಮೊಗ್ಗದಲ್ಲಿತ್ತು. ಉತ್ತರ ಕನ್ನಡದ ಮೂರು ಕಂಬ ನಿರ್ಮಾಣಕ್ಕೆ ನ್ಯಾಯಾಲಯದ ತೀರ್ಮಾನ ಬಂದಿದೆ. ಶೀಘ್ರ ಮೂರು ಕಂಬ ನಿರ್ಮಾಣ ಆಗಲಿದೆ ಎಂದರು.
ಬೆಳೆವಿಮೆ ಕೂಡ ಶೀಘ್ರ ಬಿಡುಗಡೆ ಆಗುವ ಕಾರ್ಯ ಆಗಲು ಒತ್ತಡ ತರಲಾಗಿದೆ ಎಂದೂ ಹೇಳಿದರು.