ಸುದ್ಧಿಕನ್ನಡ ವಾರ್ತೆ
ಶಿರಸಿ: ಇಲ್ಲಿನ ಆಗ್ರಾ ಗಾಯಕಿ ಕಲಾವೃಂದವು ಹಿರಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾಗಿದ್ದ ಪಂ| ಜಿ.ಎಸ್.‌ಹೆಗಡೆ ಬೆಳ್ಳೇಕೇರಿ ಸ್ಮರಣಾರ್ಥ ಕೊಡ ಮಾಡುವ “ಬೆಳ್ಳೇಕೇರಿ ಮಾಸ್ತರ್‌ ಪ್ರಶಸ್ತಿ”ಗೆ ಪುಣೆಯ ಖ್ಯಾತ ಗಾಯಕಿ ಪೌರ್ಣಿಮಾ ಧುಮಾಳೆ ಭಾಜನರಾಗಿದ್ದಾರೆ.
 ಫೆಬ್ರುವರಿ  ೨೨ ರಂದು ಮಧ್ಯಾಹ್ನ೩ ರಿಂದ ಇಲ್ಲಿನ ನೆಮ್ಮದಿ ಕುಟೀರ ಆವರಣದಲ್ಲಿ ನಡೆಯಲಿರುವ ಗುರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ  ಮಾಡಲಾಗುತ್ತಿದೆ. ಪ್ರಶಸ್ತಿಯು ೧೫ ಸಾವಿರ ರೂಪಾಯಿ ನಗದು, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನದ ನಂತರ ವಿದುಷಿ ಪೌರ್ಣಿಮಾ ಅವರ ಗಾಯನ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮೊದಲು ಬೆಳ್ಳೇಕೆರೆ ಮಾಸ್ತರ್‌ ರ ಪರಂಪರೆಯ ಸಂಗೀತ ಕಲಾವಿದರಾದ ಸಾಗರದ ವಸುಧಾ ಶರ್ಮಾ, ಹುಬ್ಬಳ್ಳಿಯ ರೇಖಾ ಹೆಗಡೆ ಹಾಗೂ ಬೆಂಗೂರಿನ  ಕಿರಣ ಭಟ್ಟ್‌ ಅವರು ಗಾಯನ ಪ್ರಸ್ತುತಪಡಿಸುವರು.
ಉದಯೋನ್ಮುಖ ಕಲಾವಿದರಾದ ಶ್ರೀರಂಜಿನಿ, ಸಂವತ್ಸರ, ಶ್ರೀಧರ ಹಾಗೂ ಪ್ರತ್ಯೂಷಾ ಅವರು ಸಂಗೀತ ಸೇವೆ ಮಾಡುವರು. ಸಂವಾದಿನಿಯಲ್ಲಿ ಪಂ.ಪ್ರಕಾಶ ಹೆಗಡೆ ಯಡಳ್ಳಿ, ಅಜಯ ವರ್ಗಾಸರ ಮತ್ತು ಸಂವತ್ಸರ ಸಾಗರ, ತಬಲಾದಲ್ಲಿ ಅರುಣ ಭಟ್ಟ್‌, ಮಂಜುನಾಥ ಮೋಟಿನ್ಸರ ಮತ್ತು ವಿನಾಯಕ ಸಾಗರ ಅವರು ಸಾಥ್‌ ನೀಡುವರು ಎಂದು ಪ್ರಕಟನೆ ತಿಳಿಸಿದೆ.