ಸುದ್ಧಿಕನ್ನಡ ವಾರ್ತೆ
ಗೋಕರ್ಣ: ಸಾಮಾಜಿಕ ಜಾಲತಾಣಗಳಲ್ಲಿ ಮೋಸವೆಸಗುವ ಜಾಲ ಹಲರನ್ನು ಜಾಣತನದಿಂದ ಮೋಸಗೊಳಿಸುವ ಅದೆಷ್ಟೋ ಘಟನೆಗಳು ನಡೆಯುತ್ತಿರುತ್ತದೆ. ಇಂತಹದ್ದೇ ಘಟನೆ ಗೋಕರ್ಣದಲ್ಲಿ ನಡೆದಿದೆ. ಟೆಲಿಗ್ರಾಂ ನಿಂದ ಬಂದ ಸಂದೇಶವನ್ನು ನಂಬಿ ಗೋಕರ್ಣದ ಅಶೋಕೆಯ ವಿನೋದ ಜೋಶಿ 13 ಲಕ್ಷ ರೂ ಕಳೆದುಕೊಂಡಿದ್ದಾರೆ.

ಆನ್ ಲೈನ್ ಟ್ರೇಡಿಂಗ ಬಗ್ಗೆ ಮಾಹಿತಿ ಪಡೆಯಲು ವಿನೋದ ಜೋಶಿ ಎಂಬುವರು ಗ್ರುಪ್ ಗೆ ಸೇರಿದ್ದರು. ಅಲ್ಲಿ ಯಧು ಶರ್ಮಾ, ಭರತ್ ಕದಂ ಎಂಬಾತನನ್ನು ಪರಿಚಯ ಮಾಡಿಕೊಂಡರು. ಅವರು ಹೇಳಿದಂತೆಯೇ ಎಲ್ಲ ಸೂಚನೆಯನ್ನು ಪಾಲಿಸಿದರು. ಕೊನೆಗೆ ಅಧಿಕ ಹಣ ಮಾಡುವ ಆಸೆಯಿಂದ ಜನವರಿ 2 ರಂದು 13,63,400 ರೂ ಹೂಡಿಕೆ ಮಾಡಿದರು. ಆದರೆ ಯಾವುದೇ ಲಾಭ ಬಾರದ ಕಾರಣ ಹಣ ಮರಳಿ ಪಡೆಯುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.

ಆದರೆ ಜೋಶಿ ರವರ ಹಣ ಮರಳಿ ಸಿಲೇ ಇಲ್ಲ. ಈ ಕುರಿತು ಪ್ರಶ್ನಿಸಿದಾಗ ಜೋಶಿ ರವರನ್ನು ಟೆಲಿಗ್ರಾಂ ಗುಂಪಿನಿಂದ ತೆಗೆದುಹಾಕಲಾಯಿತು. ಮೋಸ ಹೋಗಿರುವುದನ್ನು ಅರಿತ ಅವರು ಕಾರವಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.