ಸುದ್ಧಿಕನ್ನಡ ವಾರ್ತೆ
ಶಿರಸಿ: 3 ವರ್ಷದ ಪುಟಾಣಿ ಭಗವಧ್ಗೀತೆಯ 9 ನೇಯ ಅಧ್ಯಾಯದ ಶ್ಲೋಕಗಳನ್ನು ಕಂಠಸ್ಥ ಮಾಡಿಕೊಂಡು ಹೇಳಿಕೊಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತುಂಬಾ ಜನಮೆಚ್ಚುಗೆಗೆ ಪಾತ್ರವಾಗಿತ್ತು.

ಶಿರಸಿಯ ಸೋಂದಾ ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಗವಧ್ಗೀತಾ ಅಭಿಯಾನದ ಸಾರ್ಥಕತೆ. ಸಣ್ಣ ಮಕ್ಕಳಿಂದಾದಿಯಾಗಿ ಎಲ್ಲರನ್ನೂ ಇದು ತಲುಪಿದೆ ಎಂಬುದಕ್ಕೆ ಇಂತಹ ಹಲವು ಸಣ್ಣ ಪುಟ್ಟ ಸನ್ನಿವೇಶಗಳು ಸಾಕ್ಷಿಯಾಗಿದೆ.

ಭಗವಧ್ಗೀತೆಯ 9 ನೇಯ ಅಧ್ಯಾಯ ಕಂಠಸ್ಥಮಾಡಿಕೊಂಡಿರುವ 3 ವರ್ಷದ ಪುಟಾಣಿ ಕುಮಾರಿ ಶ್ರಾವಣಿ ಸೋಂದಾ ಶ್ರೀಮಠಕ್ಕೆ ಆಗಮಿಸಿ ಪರಮಪೂಜ್ಯ ಯತಿದ್ವಯರ ದರ್ಶನ ಪಡೆದು ಫಲ ಮಂತ್ರಾಕ್ಷತೆ ಸ್ವೀಕರಿಸಿದಳು.