ಸುದ್ದಿ ಕನ್ನಡ ವಾರ್ತೆ

ಶಿರಸಿ: ಕೇಂದ್ರ ಕೃಷಿ
ಸಚಿವ ಶಿವರಾಜ್ ಸಿಂಗ್ ಚೌವ್ಹಾಣ
ಅವರನ್ನು ಬುಧವಾರ ಭೇಟಿ ಮಾಡಿದ ಅಡಿಕೆ ಬೆಳೆಗಾರರು
ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಅವರ
ಇನ್ನಿತರ ಸಮಸ್ಯೆಗಳ ಕುರಿತು ಅಡಿಕೆ ಬೆಳೆಗಾರರ ಪ್ರತಿನಿಧಿಗಳ ನಿಯೋಗ ಗಮನ ಸೆಳೆಯಿತು.

ನವದೆಹಲಿಯ ಕೃಷಿ ಭವನದಲ್ಲಿ
ಸಂಸದರಾದ ಬಿ.ವೈ.ರಾಘವೇಂದ್ರ, ವಿಶ್ವೇಶ್ವರ ಹೆಗಡೆ
ಕಾಗೇರಿ,
ಕ್ಯಾಪ್ಟನ್ ಬ್ರಿಜೇಶ ಚೌಟ್ ಹಾಗೂ ಕೋಟಾ ಶ್ರೀನಿವಾಸ
ಪೂಜಾರಿ ಅವರ ಮುಂದಾಳತ್ವದಲ್ಲಿ, ಸಾಗರ ಹಾಗೂ ಶಿರಸಿ
ಪ್ರಾಂತ್ಯದ ರೈತರ ಪ್ರತಿನಿಧಿಗಳಾದ
ಎಚ್.ಎಸ್.ಮಂಜಪ್ಪ ಸೊರಬ ಹಾಗೂ ದಿ ತೋಟಗಾರ್ಸ್
ಕೋ-ಆಪರೇಟಿವ್ ಸೇಲ್ ಸೊಸೈಟಿ
ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯರ ನೇತೃತ್ವದ ನಿಯೋಗವು
ಅಕ್ರಮವಾಗಿ ಆಮದು ಬರುವ ಅಡಿಕೆಯನ್ನು
ತಡೆಯಬೇಕು ಮತ್ತು ಎಫ್.ಎಸ್.ಎಸ್.ಐ. ಅವರು ಈಗ
ನಿರ್ದಿಷ್ಟ ಪಡಿಸಿದ ಅಡಿಕೆ ತೇವಾಂಶ ಪ್ರಮಾಣ ಶೇಕಡಾ ೭
ರಿಂದ ಶೇಕಡಾ ೧೧ ಕ್ಕೆ ಹೆಚ್ಚಿಸುವಂತೆ ಆಗಬೇಕು ಎಂದು
ಮನವಿ ನೀಡಲಾಯಿತು. ಮೈಲು ತುತ್ತದ
ಮೇಲೆ ಈಗ ವಿಧಿಸುತ್ತಿರುವ ಜಿ.ಎಸ್.ಟಿ.ಯನ್ನು
ಶೇಕಡಾ ೧೮ ರಿಂದ ಶೇಕಡಾ ೫ ಕ್ಕೆ ಇಳಿಸ ಬೇಕು ಎಂದೂ ವಿನಂತಿಸಲಾಯಿತು.

ಕೃಷಿ ಸಚಿವರು ಸಮಸ್ಯೆಗಳನ್ನು ಆಲಿಸಿ
ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಡಿಕೆ
ಬೆಳೆಗಾರರು ಪ್ರಸ್ತುತ ಎದುರುಸುತ್ತಿರುವ
ಸಮಸ್ಯೆಗಳ ಪರಿಹಾರಕ್ಕಾಗಿ ತೀವ್ರ
ಗಮನಹರಿಸುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಯು.ಟಿ.ರಾಮಪ್ಪ, ಅನಿಲ
ಒಡೆಯರ್, ಮಲ್ಲಿಕಾರ್ಜುನ ಸಾಗರ, ದಿ
ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ನಿರ್ದೇಶಕ ನರಸಿಂಹ ಹೆಗಡೆ,
ಹಣಕಾಸು ಮತ್ತು ವ್ಯಾಪಾರ ಮಾರ್ಗದರ್ಶಕ
ಪ್ರಕಾಶ ಹೆಗಡೆ ಹುಳಗೋಳ ಹಾಗೂ
ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ
ಚಿದಾನಂದ ಹೆಗಡೆ ಅವರುಗಳು ಉಪಸ್ಥಿತರಿದ್ದರು.