ಸುದ್ದಿ ಕನ್ನಡ ವಾರ್ತೆ
ಶಿರಸಿ: ಥೈಲ್ಯಾಂಡಿನ ಚೋನ್ ಬುರಿಯಲ್ಲಿ ನಡೆದ ಜೇನಿನ ಕುರಿತ ಅಂರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಭಾರತದ ಅಪ್ಪನ ಮಗಳು
ಜೇನಿನ ಮಹತ್ವ, ಆಯುರ್ವೇಧೀಯ ಗುಣಗಳನ್ನು ಸಾದರ ಪಡಿಸಿ ಗಮನ ಸೆಳೆದರು.
ಪ್ರಧಾನಿ ಮೋದಿ ಹೊಗಳಿದ ಜೇನು ತಜ್ಞ ಮಧುಕೇಶ್ವರ ಹೆಗಡೆ ಹಾಗೂ ಮಧು ಸಂಜೀವಿನಿ ಆಯುರ್ವೇದ ಕೇಂದ್ರದ ಯುವ ವೈದ್ಯೆ ಮಧು ಹೆಗಡೆ ಅವರು ಆಯುರ್ವೇದದಲ್ಲಿ ಜೇನಿನ ಮಹತ್ವದ ಕುರಿತು ವಿಷಯ ಮಂಡಿಸಿ ಮೆಚ್ಚುಗೆ ಗಳಿಸಿದರು.
ಭಾರತದಿಂದ ಆರು ಜನ ತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಥೈಲ್ಯಾಂಡಿನ ಹೆಸರಾಂತ ಭುರಪ್ಪಾ ಯುನಿವರ್ಸಿಟಿ ಹಾಗೂ ಭಾರತದ ವಿ.ಶಿವರಾಮ ರಿಸರ್ಚ ಫೌಂಡೇಶನ್ ಈ ಅಂತರಾಷ್ಟ್ರೀಯ ಸಮಾವೇಶ ಆಯೋಜಿಸಿತ್ತು. ಇದರೊಳಗೆ ಭಾರತ ಸೇರಿದಂತೆ ಒಟ್ಟು ಹನ್ನೆರಡು ದೇಶಗಳು ಭಾಗವಹಿಸಿದ್ದವು.