ಸುದ್ದಿ ಕನ್ನಡ ವಾರ್ತೆ

ಶಿರಸಿ: ಕಾಡು ಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿರುವ ಅದೆಷ್ಟು ಘಟನೆಗಳು ನಡೆಯುತ್ತಿವೆ.  ಇದೀಗ ಚಿರತೆಯೊಂದು ಸಂಸದ ಕಾಗೇರಿ ಅವರನ್ನು ಹುಡುಕಿಕೊಂಡು ಮನೆಗೆ ಬಂದ ಘಟನೆ ನಡೆದಿದೆ.

ಕಳೆದ ಆರೆಂಟು ತಿಂಗಳ ಹಿಂದೆ ಮನೆಯ ಸಮೀಪ ದಾರಿಯಲ್ಲಿ‌ ತೆರಳುವಾಗ ಕಂಡಿದ್ದ ಚಿರತೆಯೊಂದು ಈಗ ಸಂಸದರನ್ನು‌ ಮನೆಗೇ ಹುಡುಕಿಕೊಂಡು ಹೋದಂತೆ ಭಾಸವಾಗುವ ಘಟನೆ ಸಂಕ್ರಾಂತಿ ಹಬ್ಬದ ಬೆಳಗಿನ ಜಾವ ನಡೆದಿದೆ.

ತಾಲೂಕಿನ ಕಾಗೇರಿ ಗ್ರಾಮದಲ್ಲಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಯ ಆವರಣಕ್ಕೆ ರಾತ್ರಿ ನಾಯಿ ಹಿಡಿಯಲು ಚಿರತೆ ಬಂದಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಚಿರತೆ ಬಂದಿರುವುದು ಮೂರು ಪ್ರತ್ಯೇಕ ಕ್ಯಾಮರದಲ್ಲಿ ಸೆರೆಯಾಗಿದ್ದು ಇದು ಗ್ರಾಮದ ಜನರನ್ನು ವನ್ಯಮೃಗದ ಹಾವಳಿಯ ಆತಂಕ ಉಂಟಾಗುವಂತೆ ಆಗಿದೆ.

ತಾಲೂಕಿನ ಸುತ್ತಮುತ್ತ ಚಿರತೆ ಆಗಾಗ ಪ್ರತ್ಯಕ್ಷವಾಗುತ್ತಿದ್ದು, ಕಳೆದ ನವೆಂಬರನಲ್ಲಿ ಆನೆಗಳ ಹಿಂಡೂ ಕೂಡ ತೋಟ, ಭತ್ತದ ಗದ್ದೆಗಳಲಲ್ಲಿ ಓಡಾಟ ಮಾಡಿದ್ದವು. ಈಗ ಚಿರತೆ ಹಳ್ಳಿ, ಕಾಡೆನ್ನದೇ ಓಡಾಟ ನಡೆಸಿದೆ.