ಸುದ್ಧಿಕನ್ನಡ ವಾರ್ತೆ
Goa: ಕೊಂಕಣ ರೈಲ್ವೆ ಕನ್ನಡ ಅಭಿಮಾನಿಗಳ ಬಳಗದ ಆಯೋಜಿಸಿದ್ಧ “ಮಹೇಂದ್ರ ಶಪಥ” ಯಕ್ಷಗಾನ ಪ್ರಸಂಗವು ಗೋವಾದ ಮಡಗಾಂವ ಕೊಂಕಣ ರೈಲ್ವೆ ಸಮುದಾಯ ಭವನದಲ್ಲಿ ಜನವರಿ 11 ರಂದು ಸಂಜೆ 6 ಗಂಟೆಗೆ ನಡೆಯಿತು.
ಯಕ್ಷಸಿರಿ ಯಕ್ಷ ಪಲ್ಲವಿ ಟ್ರಸ್ಟ (ರಿ)ಯಕ್ಷಗಾನ ಮಂಡಳಿ ಮಾಳಕೋಡ್ ಇವರಿಂದ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್ ರವರ ಸಾರಥ್ಯದಲ್ಲಿ ದಕ್ಷಿಣೋತ್ತರಕನ್ನಡದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಹಾಸ್ಯಮಯ ಪೌರಾಣಿಕ ಯಕ್ಷಗಾನ ಇದೇ ಮೊದಲ ಬಾರಿಗೆ ಗೋವಾದ ಮಡಗಾಂವನಲ್ಲಿ ಚಿಂತನಾಳ ಗಾನಸುಧೆಯಲ್ಲಿ ಆಯೋಜಿಸಲಾಗಿತ್ತು.
ಭಾಗವತರಾಗಿ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್, ಸತೀಶ್ ಪಟಗಾರ, ಮದ್ಧಲೆ;ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ;ಶಿವಾನಂದ ಕೋಟಾ, ಮುಮ್ಮೇಳದಲ್ಲಿ ಗೋಪಾಲ ಆಚಾರ್ಯ ತೀರ್ಥಳ್ಳಿ, ಉದಯ ಹೆಗಡೆ ಮಾಳಕೋಡ್, ನಾಗೇಶ ಕುಳಿಮನೆ, ಸ್ತ್ರೀ ವೇಷ ನಿಹಾರಿಕಾ ಭಟ್ , ಹಾಸ್ಯ;ನಾಗೇಂದ್ರ ಭಟ್ ಮೂರೂರು ರವರು ಭಾಗವಹಿಸಿದ್ಧರು.
ಈ ಯಕ್ಷಗಾನ ವೀಕ್ಷಣೆಗೆ ಗೋವಾ ರಾಜ್ಯದ ಮೂಲೆ ಮೂಲೆಯಿಂದ ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.