ಸುದ್ದಿ ಕನ್ನಡ ವಾರ್ತೆ

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾವತಿಯಿಂದ ಹೈನುಗಾರಿಕೆ ತರಬೇತಿಯನ್ನು ಸಂತ್ರಿ ಗ್ರಾಮದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ತರಬೇತಿಯನ್ನು ಆಯೋಜಿಸಲಾಗಿತ್ತು ಈ ತರಬೇತಿಯ ಸಂಪನ್ಮೂಲ ವ್ಯಕ್ತಿ ಡಾ ಮಂಜಪ್ಪಾ ಮುಖ್ಯ ಪಶು ಆಸ್ಪತ್ರೆ ವೈದ್ಯಾಧಿಕಾರಿಗಳು ಪಶು ಪಾಲನಾ ಪಶು ವೈದ್ಯಕೀಯ ಇಲಾಖೆ ಜೊಯಿಡಾ ಇವರು ಹೈನುಗಾರಿಕೆ ಯಲ್ಲಿ ಜಾನುವಾರಗಳ ಆಯ್ಕೆ ಮತ್ತು ಅದರ ಆಹಾರಗಳ ಕುರಿತು ಮಾಹಿತಿ ತರಬೇತಿ, ಜಾನುವಾರಗಳಿಗೆ ಲಸಿಕೆ, ಆರೋಗ್ಯ,ಇನ್ಸೂರೆನ್ಸ್ ಕುರಿತು ತರಬೇತಿಯಲ್ಲಿ ಮಾಹಿತಿ ನೀಡಿದರು . ಅಶೋಕ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಇವರು ಪ್ರಾಸ್ತವಿಕವಾಗಿ ಸಂಸ್ಥೆಯಲ್ಲಿ ಸಿಗುವ ತರಬೇತಿಗಳ ಕುರಿತು ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು ಈ ಕಾರ್ಯಕ್ರಮವನ್ನು ಮಂಜುನಾಥ್ ಸಾವಂತ್ ಸಮುದಾಯ ಸಂಘಟಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಆಯೋಜಿಸಿ ವಂದಿಸಿದರು ಈ ತರಬೇತಿಯಲ್ಲಿ 25 ಜನ ಸಂಘದ ಸದಸ್ಯರು ಭಾಗವಹಿಸಿದ್ದರು.