ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಹರ ಹರ ಮಹಾದೇವ , ಓಂ ನಮಃ ಶಿವಾಯ ಮಂತ್ರ ಜಯಘೋಷ ನಡುವೆ ತಾಲೂಕಿನ ಝಾಲಾವಳಿ ಗ್ರಾಮದ ಕದಂಬರ ಕಾಲದ ಕಾನೇರಿ ನದಿಯ ದಂಡೆಯಲ್ಲಿ ಇರುವ ಶ್ರೀ ರಾಮಲಿಂಗೇಶ್ವರ ದೇವರ ಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಕಾನೇರಿ ನದಿಯಲ್ಲಿ ರಾಮಲಿಂಗೇಶ್ವರ ದೇವರ ಲಿಂಗವಿದೆ. ಮಧ್ಯಾಹ್ನ ಆಗುತ್ತಲೇ ನದಿಯಲ್ಲಿ ತೀರ್ಥೋದ್ಭವ ಆಗುತ್ತದೆ ಎನ್ನುವುದು ಭಕ್ತರ ನಂಬಿಕೆ ಆಗಿದೆ. ಗ್ರಾಮದ ಮಿರಾಶಿ ಮಧ್ಯಾಹ್ನ ನದಿ ದಂಡೆಯಲ್ಲಿ ಇರುವ ರಾಮಲಿಂಗೇಶ್ವರ ದೇವರಿಗೆ ಪೂಜೆ ಮಾಡಿದ ನಂತರ, ಕಾನೇರಿ ನದಿಯಲ್ಲಿ ಇರುವ ದೇವರ ಲಿಂಗದ ಪೂಜೆ ಮಾಡಲು ನದಿಯಲ್ಲಿ ಇಳಿಯುತ್ತಾರೆ. ಕೋಲಿಗೆ ಹೂವಿನ ಮಾಲೆ ಕಟ್ಟಿ ಈಜಿ ನದಿಯ ಇನ್ನೊಂದು ದಡ ಸೇರುವಾಗಲೇ ಭಕ್ತರು ದೇವರ ಹೆಸರಿನಲ್ಲಿ ಜಯಘೋಷ ಹಾಕುತ್ತಾ ತೆಂಗಿನ ಕಾಯಿಯನ್ನು ನದಿಯಲ್ಲಿ ಎಸೆಯುತ್ತಾರೆ. ಇಡಿ ನದಿ ತುಂಬ ಕಾಯಿಗಳು ಬಿದ್ದಿರುತ್ತದೆ. ಗ್ರಾಮದ ಪ್ರಮುಖರು ಈಜಿ ಕಾಯಿ ಸಂಗ್ರಹಣೆ ಮಾಡಿ ಪ್ರಸಾದ ಹಂಚಲಾಗುತ್ತದೆ.
ಮಿರಾಶಿಯಿಂದಲೇ ದೇವರ ಪೂಜೆ.
ಶ್ರೀ ರಾಮಲಿಂಗೇಶ್ವರ ದೇವರಿಗೆ ತಲೆತಲಾಂತರದಿಂದ ಬುಡಕಟ್ಟು ಕುಣಬಿ ಪದ್ಧತಿಯಲ್ಲಿ ಮಿರಾಶಿ ಯಾವುದೇ ಪೂಜೆ ಮಾಡಿ ಬಂದಿದ್ದು ವಿಶೇಷ.
ಬಂದ ಎಲ್ಲಾ ಭಕ್ತರಿಗೆ ಮಧ್ಯಾಹ್ನದ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ.
