ಸುದ್ದಿ ಕನ್ನಡ ವಾರ್ತೆ

ಶಿರಸಿ: ಇಲ್ಲಿನ ಕುಮಟಾ ಶಿರಸಿ ಮಾರ್ಗದ ದೇವಿಮನೆ ರಸ್ತೆಯಲ್ಲಿ ಮಳೆಗಾಲದ ಸಂಚಾರದಲ್ಲಿ ಎಚ್ಚರಿಕೆ ಬೇಕೆನ್ನುವ ಸಂಗತಿಯ ಜೊತೆಗೆ ಮೂವರು ಪವಾಡ ಸದೃಶ್ಯವಾಗಿ‌ ಕಲ್ಲಿನ ಬಂಡೆ ಒಳಗೊಂಡ ಗುಡ್ಡದ ಧರೆ ಕುಸಿತದ ಅಪಾಯದಿಂದ ಬಚಾವ್ ಆದ ಘಟನೆ ನಡೆದಿದೆ.
ಶಿರಸಿ ಎಸಿ ಕಚೇರಿಯ ಶಿವಪ್ರಕಾಶ್ ಹೆಗಡೆ, ಕೆನರಾ ಬ್ಯಾಂಕ್ ಸಿಬ್ಬಂದಿ ಸುಮಾ ಹೆಗಡೆ ಹಾಗು ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿ ಕಾಶಿ ಭಟ್ ಅಪಾಯದಿಂದ‌ ಬಚಾವ್ ಆದವರಾಗಿದ್ದಾರೆ.

ಕ್ಷಣದಲ್ಲಿ ವಾಹನದ ವೇಗ ಹೆಚ್ಚಿಸಿದ್ದರೆ ಬದುಕುಳಿಜಯ ವ ಸಾಧ್ಯತೆ ಕಡಮೆ ಇರುವಂಥ ಅಪಾಯವಾಗಿದ್ಧು, ಕಾರಿನ ಚಾಲಕರಾಗಿದ್ದ ಶಿವಪ್ರಸಾದ ಅವರು ಮರ ಬೀಳುವುದನ್ನು ವಾಹನದ ಬೆಳಕಿನಲ್ಲೇ ಗಮನಿಸಿ ತಕ್ಷಣ ಹಿಮ್ಮುಖ ಚಲಿಸಿದ್ದರಿಂದ ಅಪಾಯದಿಂದ ಪಾರಾಗಲು ಸಾಧ್ಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಉದಯವಾಣಿಗೆ ತಿಳಿಸಿದ್ದಾರೆ. ಕಳೆದ‌ ಶುಕ್ರವಾರ ರಾತ್ರಿ ಕುಮಟಾ ಕಡೆಯಿಂದ ಆಗಮಿಸಿ ದೇವಿಮನೆ ಘಟ್ಟದ ಕ್ಷೇತ್ರ ಪಾಲಕನಿಗೆ ಕೈ ಮುಗಿದು ವಾಹನ ಮುನ್ನಡೆಸುತ್ತಿದ್ದಂತೇ ಕಲ್ಲು ಬಂಡೆಗಳ ಜೊತೆ‌ಮರ, ಮಣ್ಣು ಕುಸಿತ ಆಗತೊಡಗಿದ್ದವು. ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಈ ಘಟನೆ ಆಗಿದೆ. ತಕ್ಷಣ ಸಾವರಿಸಿಕೊಂಡು ಶಿವು ಅವರನ್ನು ಸಹಾಯಕ ಆಯುಕ್ತೆ ಕಾವ್ಯರಾಣಿಯವರಿಗೆ ಗುಡ್ಡ ಕುಸಿತದ ಬಗ್ಗೆ ಮಾಹಿತಿ ನೀಡಿದ್ದರಿಂದ ಅವರು ತಕ್ಷಣಕ್ಕೆ ಕ್ರಮ ಕೈಗೊಂಡು ಲಘು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.