ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರದ ರಾಮಲಿಂಗೇಶ್ವರ, ಹನುಮಾನ ಗಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನ, ಸ್ವರೂಪ ಮಂದಿರ,ಜೋಯಿಡಾ ಭಾಗದ ನಗರಿಯ ಚಂದ್ರಮೌಳೇಶ್ವರ,ಮೈನೋಳದ ರಾಮಲಿಂಗೇಶ್ವರ,ಅಣಶಿ ಶ್ರೀ ಶಿವಲಿಂಗ ಗುಹೆಯ ದೇವರು,ನಿಗುಂಡಿಯ ಮಲ್ಲಿಕಾರ್ಜುನ ದೇವಸ್ಥಾನ, ನುಜ್ಜಿ,ಕಾಳಸಾಯಿ ಮಾತಕರ್ಣಿಯ ಗಳಗೇಶ್ವರ ದೇವಸ್ಥಾನ,ಚಾಪೇರದ ಸೋಮನಾಥ ದೇವಸ್ಥಾನ, ಡೇರಿಯೆ ಸಿದ್ಧನಾಥ ದೇವಸ್ಥಾನ, ನಂದಿಗದ್ದೆ ಗ್ರಾಮ ಪಂಚಾಯತದ ಗ್ರಾಮಗಳ ಎಲ್ಲಾ ಶಿವ ದೇವಾಲಯಗಳಲ್ಲಿ,ಕವಳಾದ ಕವಳೇಶ್ವರ ಸನ್ನಿಧಾನ ಸೇರಿದಂತೆ ತಾಲೂಕಿನ ಇನ್ನುಳಿದ ದೇವಾಲಯಗಳಲ್ಲಿ ನಸುಕಿನಿಂದಲೇ ಭಕ್ತರು ಆಗಮಿಸಿ ಸರತಿಯ ಸಾಲಿನಲ್ಲಿ ನಿಂತು ಶ್ರೀ ದೇವರಿಗೆ ಹೂವು,ಬಿಲ್ವಪತ್ರೆ, ಹಣ್ಣು,ಕಾಯಿಗಳನ್ನು ಸಮರ್ಪಿಸಿ,ಮಹಾಪೂಜೆ,ಮಹಾಭಿಷೇಕ ಮಾಡಿ,ತೀರ್ಥ ಪ್ರಸಾದ ಸ್ವೀಕರಿಸಿದರು.ಹೆಚ್ಚಿನ ಕಡೆ ಮಧ್ಯಾಹ್ನದಿಂದ ರಾತ್ರಿಯವರೆಗೆ ಅನ್ನ ಪ್ರಸಾದ ಸೇವೆ ನಡೆಯಲಿದೆ. ಮಹಾಶಿವರಾತ್ರಿಯ ಹಬ್ಬದ ನಿಮಿತ್ತ ಭಜನೆ, ಕಿರ್ತನೆ, ಹರಿಪಾಠ,ಆರತಿ,ಜಾಗರಣೆಯ ಕಾರ್ಯಕ್ರಮ ನಡೆಯಿತು. ಇನ್ನೂ ಕೆಲವು ಕಡೆ ರಾತ್ರಿಯ ವೇಳೆ ಶ್ರೀ ದೇವರ ಫಲಪಲಾವಳಿಗಳ ಸವಾಲ್ ಕಾರ್ಯಕ್ರಮ, ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು, ಕನ್ನಡ,ಕೊಂಕಣಿ,ಮರಾಠಿ ನಾಟಕದ ಪ್ರದರ್ಶನ ನಡೆಯಲಿದೆ.