ಸುದ್ದಿ ಕನ್ನಡ ವಾರ್ತೆ
ಕುಮಟಾ: ನಾಗರ ಹಾವೋಂದು ಆಹಾರ ಎಂದು ಭಾವಿಸಿ ಒಂದು ಅಡಿ ಎರಡು ಇಂಚಿನ ಚಾಕುವನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೇ ಪಡಬಾರದ ಪಾಡು ಪಟ್ಟ ಘಟನೆ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕ ಎನ್ನುವವರ ಮನೆಯಲ್ಲಿ ನಡೆದಿದೆ.
ಆಹಾರ ಅರಸುತ್ತ ಮನೆಯೊಳಗೆ ಹೊಕ್ಕ ನಾಗರ ಹಾವು, ಗೋವಿಂದ ನಾಯ್ಕ ಅವರ ಅಡುಗೆ ಕೋಣೆಯ ಗೋಡೆಯಲ್ಲಿದ್ದ ಚಾಕುವನ್ನು ಆಹಾರವೆಂದು ಗ್ರಹಿಸಿ ನುಂಗಿದೆ. ತಕ್ಷಣ ಚಾಕುವನ್ನು ನುಂಗಿದ್ದನ್ನು ಗಮನಿಸಿದ ಗೊವಿಂದ ಅವರು ಉರಗ ರಕ್ಷಕ ಪವನ್ ಅವರಿಗೆ ಕರೆಮಾಡಿ ಕರೆಸಿದ್ದು ತಕ್ಷಣ ನಾಗರಹಾವನ್ನು ಹಿಡಿದು ಪಶುವೈದ್ಯ ಸಹಾಯಕರಾದ ಅದೈತ್ ಭಟ್ ಅವರ ಸಹಾಯದಲ್ಲಿ ಹಾವಿನ ಹೊಟ್ಟೆಯಿಂದ ಚಾಕುವನ್ನು ಹೊರತೆಗೆಸಿದ್ದು ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.