ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಅಕ್ಷರ ಜ್ಞಾನ ವಿಲ್ಲದ ನಮ್ಮಕುಣಬಿ ಬುಡಕಟ್ಟುಗಳು ಲಿಪಿಗಳಿಲ್ಲದ ನಮ್ಮ ಪೌರಾಣಿಕ ಕಥೆಗಳ ಪರಿಪೂರ್ಣ ಪರಿಕಲ್ಪನೆಯನ್ನು ಹಾಡಿನ ಮೂಲಕ ಹೇಳುವ ಬುದ್ದಿ ಸಾಮರ್ಥ್ಯ ವನ್ನು ಹೋಂದಿದ್ದಾರೆ. ನಮ್ಮ ಸಂಸ್ಕೃತಿ ಉಳಿವಿಗೆ ಶ್ರಮಿಸೋಣ, ಜನಾಂಗಕ್ಕೆ ಸಿಗಬೇಕಾದ ಸಾಮಾಜಿಕ ನ್ಯಿಯಕ್ಕಾಗಿ ಹೋರಾಡೋಣ ಎಂದು ಗೋವಾ ಮಾಜಿ ಸ್ಪೀಕರ್ ರಮೇಶ ತವಾಡ್ಕರ ಹೇಳಿದರು.

ಅವರು ಜೋಯಿಡಾ ಕೇಂದ್ರದ ಕುಣಬಿ ಭವನದಲ್ಲಿ ದಿ. ಬಾಬು ರಾಮ್ ಮಿರಾಶಿ ವೇದಿಕೆಯಲ್ಲಿ ಆಯೋಜಿಸಿದ ಕುಣಬಿ ಉತ್ಸವ 2026 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದರು.
ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಉಳಿಸಬೇಕಿದೆ. ನಮ್ಮ ಜನಂಗಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸೋಣ ಎಂದು ಕರೆನೀಡಿದರು.
ಅತಿಥಿಯಾಗಿ ಪಾಲ್ಗೊಂಡ ಕ. ಸಾ. ಪ. ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ಮಾತನಾಡಿ, ಜೋಯಿಡಾ ತಾಲೂಕಿಗೆ ಶ್ರೀಮಂತ ಪರಂಪರೆಯನ್ನು ನೀಡಿದ ಬುಡಕಟ್ಟುಗಳು, ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಮುಂದೆ ಬರಬೇಕಿದೆ. ರಾಜ್ಯಕ್ಕೆ ಬೆಳಕುಕೊಟ್ಟು, ದೀಪದ ಬುಡದಲ್ಲಿ ಕತ್ತಲೆ ಎಂಬಂತ ಪರಿಸ್ಥಿತಿ ಇಲ್ಲಿನದಾಗಿದೆ. ಉತ್ತರ ಕನ್ನಡ ಜಿಲ್ಲೆ ಅತಿಹೆಚ್ಚು ಬುಡಕಟ್ಟು ಜನಾಂಗ ಹೊಂದಿರುವ ಜಿಲ್ಲೆ. ಸಮಾಜದ ಪ್ರಗತಿಯ ಜೋತೆ ಸಾಂಸ್ಕೃತಿಕ, ಜನಪದ,ಪಾರಂಪರಿಕ ಪದ್ದತಿ ಬೆಳಗುವಂತಾಗಲಿ ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಕುಣಬಿ ಉತ್ಸವ ಕಾರ್ಯಕ್ರಮದ ರುವಾರೀ ಹಾಗೂ ಕುಣಬಿ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ನಮ್ಮ ಪೀಳಿಗೆ ನಮ್ಮ ಜನಾಂಗ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಈ ಉದ್ದೇಶಕ್ಕಾಗಿ ಆಮ್ಚಿ ಸಂಸ್ಕೃತಿ ಆಮ್ಚಿ ಉತ್ಸವ ಎಂಭ ದ್ಯೇಯಧಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಉಡುಗೆ ತೋಡುಗೆ, ವೇಷಭೂಷಣ ಸಂರಕ್ಷಣೆ ಆಗಬೇಕಿದೆ. ಗ್ರಾಮದ ದೇವರುಗಳ ರಕ್ಷಣೆ, ದೈವತ್ವದ ಪರಿಕಲ್ಪನೆ ಯುವಕರಲ್ಲಿ ಮೂಡಬೇಕಿದೆ. ಕಾಡುನಾಡು ಉಳಿಸಿ ಸಂರಕ್ಷಣೆ ಮಾಡಿದ ನಮಗೆ ರಾಜಕೀಯ ನಾಯಕರಿಂದ ಕಡೆಗಣನೆ ಆಗುತ್ತಿದೆ. ಜನಾಂಗ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ನಿಲ್ಲಿಸಬಾರದು ಎಂದರು.
ಬುಡಕಟ್ಟು ಜನಾಂಗಗಳ ಅಧ್ಯಕ್ಷ ಶ್ರೀನಿವಾಸ್ ಶಾಸ್ತ್ರೀ ಮಾತನಾಡುತ್ತಾ, ಬುಡಕಟ್ಟು ಯುವಕರು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರಬೇಕು, ಪ್ರಾಮಾಣಿಕರಾಗಿ ಬೆಳೆಯಬೇಕು, ಸಮಾಜಿಕ ನ್ಯಾಯವಾದ ಪರಿಶಿಷ್ಟ ಪಂಗಡ ಹೋರಾಟ ಬಲಗೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರೀನ ಇಂಡಿಯಾದ ಮಹೇಂದ್ರ ಕುಮಾರ, ಅರಣ್ಯಾಧಿಕಾರಿ ಸಂತೋಷ ಚವ್ಹಾಣ, ಕುಣಬಿ ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪ, ಕುಣಗಿಣಿ ಮಠದ ರಘುವೀರ ಸ್ವಾಮಿ, ಮಾತನಾಡಿದರು.
ವೇದಿಕೆಯಲ್ಲಿ ಕುಣಬಿ ಸಮಾಜದ ಸಂಸ್ಥಾಪಕ ಅಧ್ಯಕ್ಷ ಮಾಬಳು ಕುಂಡಲ್ಕರ, ಯಲ್ಲಾಪುರ ತಾಲೂಕಾ ಅಧ್ಯಕ್ಷ ನಾರಾಯಣ ಕುಣಬಿ, ಕಾರವಾರದ ಅಧ್ಯಕ್ಷ ಆರ್. ಡಿ. ಗಾಂವ್ಕರ, ದಿವ್ಯಾನಿ ಗೌಡ, ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಉತ್ಸವದಲ್ಲಿ ಕೃಷ್ಣಾ ಗಾವಡಾ ತಂಡದಿಂದ ಬುಡಕಟ್ಟು ಸಂಪ್ರದಾಯದ ಪ್ರಾರ್ಥನೆ ನಡೆಯಿತು. ಅಜೀತ ಮಿರಾಶಿ ಸ್ವಾಗತಿಸಿದರು. ಸುಭಾಷ ಕಾಜುಗಾರ ಹಾಗೂ ಮಿಥಾಲಿ ಕುಂಬಗಾಳ್ಕರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕುಣಬಿ ಸಂಪ್ರದಾಯ ಹಾಡುಗಳು, ನೃತ್ಯ ಹಾಗೂ ವಿವಿಧ ಮಹಿಳಾ ಮತ್ತು ಪುರುಷರ ಕಲಾ ತಂಡದಿಂದ ವೈವಿದ್ಯಮಯ ಸೋಗಡಿನ ಸಾಂಸ್ಕೃತಿಕ ಕುಣಿತ ನೆರೆದ ಸಾವಿರಾರು ಪ್ರೇಕ್ಷಕರ ಮನಸೊರೆಗೊಂಡಿತು. ಕುಣಬಿ ಉತ್ಸವ ತಾಲೂಕಿನ ಜನತೆಯ ಮೆಚ್ಚುಗೆಯೊಂದಿಗೆ ಯಶಸ್ವಿ ಕಂಡಿತ್ತು.