ಸುದ್ದಿ ಕನ್ನಡ ವಾರ್ತೆ

ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಆವಾರದಲ್ಲಿ ನಿನ್ನೆಯಿಂದ ನಡೆಯುತ್ತಿರುವ ಜೋಯಿಡಾ ದ ಕಾಡುಮನೆ ನರಸಿಂಹ ಭಟ್ ತಂಡ ದವರು ಪರಿಚಯಿಸುತ್ತಿರುವ ಜೇನು ಕೃಷಿ ಬೆಂಗಳೂರು ಜನತೆಗೆ, ಹೀಗೂ ಉಂಟೆ ಎಂಬಷ್ಟು ಜೇನು ಕೃಷಿ, ಜೇನಿನಿಂದ, ಜಗತ್ತಿಗೆ ಆಗುವ ಲಾಭದ ಪರಿಚಯ ಆಗುತ್ತಿದೆ, ಇದು ತಂಡದವರಿಗೂ ಸಂತಸ ತಂದಿದೆ, ಪ್ರತಿ ದಿನವೂ ಸಾವಿರಾರು ಜನರು ಬಂದು ಜೇನಿನ ಪರಿಚಯ ಮತ್ತು ಜೇನಿನ ಲಾಭ ವನ್ನು ಪಡೆಯುತ್ತಿದ್ದಾರೆ. ಶಾಸಕರು ಗಳು, ಮಂತ್ರಿಗಳು, ಸಾರ್ವಜನಿಕ ರು ಬಂದು ಮಾಹಿತಿ ಪಡೆದುಕೊಂಡು ಶುಭ ಹಾರೈಸುತ್ತಿದ್ದಾರೆ.

ಸಚಿವರಾದ ಚಲುವರಾಯ ಸ್ವಾಮಿ ಅವರು ಬಂದು ಜೇನಿನ ಮಾದರಿ ಮಾಹಿತಿ ಪಡೆದುಕೊಂಡು ಭಟ್ ರೊಂದಿಗೆ ಖುಷಿ ಹಂಚಿಕೊಂಡರು. ನಾಳೆ ಒಂದು ದಿನ ಜೋಯಿಡಾ ಜೇನಿನ, ಜೇನು ಗೂಡಿನ ಪ್ರಾತ್ಯಕ್ಷಿಕೆ ಅರಮನೆ ಆವಾರದಲ್ಲಿ ನಡೆಯಲಿದೆ. ಬೆಂಗಳೂರು ಜನರು ಬಂದು ಮಾಹಿತಿ ಮತ್ತು ಶುದ್ಧ ಜೇನು ತುಪ್ಪ ಪಡೆದು ಕೊಳ್ಳಿ ಎಂದು ಸಂಘಟಕರಾದ, ನರಸಿಂಹ ಭಟ್ ಮತ್ತು ದ್ರುವ ಭಟ್ ಹೇಳಿದ್ದಾರೆ.