ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ತಾಲ್ಲೂಕಿನ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಪೋಲಿ ಗ್ರಾಮದ ಶ್ರೀ ಸೋಮನಾಥ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಭಾನುವಾರ ಫೆ 08 ರಂದು ಅದ್ದೂರಿಯಾಗಿ ನಡೆಯಲಿದೆ.

ಭಾನುವಾರ ಬೆಳಗ್ಗೆ ದೇವರ ಅಭಿಷೇಕ, ಮದ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಸಾತೇರಿ ಮಾತೆಯ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಮದ್ಯಾಹ್ನ 2.30 ರಿಂದ ರಾತ್ರಿ 11 ಗಂಟೆಯ ವರೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 10 ಗಂಟೆಗೆ ದೇವರ ಹಣ್ಣು ಹಂಪಲುಗಳ ಸವಾಲು ಕಾರ್ಯಕ್ರಮ ಹಾಗೂ ರಾತ್ರಿ 11 ಗಂಟೆಯಿಂದ ಮನರಂಜನೆಗಾಗಿ ಕಾರವಾರ ಸಾಕಾರ ನಾಟ್ಯ ಮಂಡಳಿಯವರು ಪ್ರದರ್ಶಿಸುವ ಕೊಂಕಣಿ ನಾಟಕ ಪ್ರದರ್ಶನ ನಡೆಯಲಿದೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಪಡೆದು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ಪತ್ರಕರ್ತ, ಉಪನ್ಯಾಸಕ ಜ್ಞಾನೇಶ್ವರ ದೇಸಾಯಿ ಮನವಿ ಮಾಡಿದ್ದಾರೆ.