ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ಪ್ರಸಿದ್ದ ಕಾಡುಮನೆ ಜೇನುಗಳು ಬೆಂಗಳೂರು ಅರಮನೆ ಮೈದಾನದ ಸುತ್ತೆಲ್ಲ ಇಡೀ ಬೆಂಗಳೂರನ್ನು ಸುತ್ತುವ ಅವಕಾಶ ಒದಗಿ ಬಂದಿದೆ, ಇಂದಿನಿಂದ ನಾಡಿದ್ದು ವರೆಗೆ ಮೂರು ದಿನಗಳ ಕಾಲ ಕಾಡುಮನೆಯ ಜೇನುಗಳು ಬೆಂಗಳೂರು ಜನತೆಯನ್ನು ಅಚ್ಚರಿ ಪಡಿಸಿದರೆ ಆಶ್ಚರ್ಯ ವಿಲ್ಲ, ಕಾಡುಮನೆಯ ಯಜಮಾನ ನರಷಿಂಹ ಭಟ್ ಮತ್ತು ಮಗ ದ್ರುವ ಭಟ್ ಇತರರು, ಸರಕಾರದ ಆದೇಶದಂತೆ ಈಗಾಗಲೇ ಬೆಂಗಳೂರಿ ನಲ್ಲಿದ್ದಾರೆ. ಅಲ್ಲಿ ಜೇನಿನ ಕೃಷಿಯ ಬಗ್ಗೆ ಜೇನು ನಮಗೆಹೇಗೆ ವರದಾನ ಎಂಬ ಕುರಿತು ಮಾಹಿತಿ ನೀಡುತ್ತಿದ್ದಾರೆ. ಜೋಯಿಡಾ ದ ಜೇನು ತುಪ್ಪ ಕೂಡ ಬೆಂಗಳೂರು ಜನತೆಗೆ ಜೇನು ಗೂಡು ನೋಡುತ್ತಿದ್ದಂತೆ, ಪಕ್ಕದಲ್ಲೇ ಸಿಗುತ್ತಿದೆ, ಸರಕಾರ ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಜೇನುಗೂಡು ನೋಡುವ ವ್ಯವಸ್ಥೆ ಮಾಡಿದೆ. ಕೃಷಿ ಆಧಾರಿತ ಮೌಲ್ಯ ವರ್ದಿತ ಉತ್ಪನ್ನ ಗಳ ಉತ್ಪಾದನೆ ಮತ್ತು ಮಾಹಿತಿಯನ್ನು ರೈತರಿಗೆ, ನೋಡುಗರಿಗೆ ನೀಡಲು ಸರಕಾರ ಕಾಡುಮನೆ ಭಟ್ ರಿಗೆ ಆಮಂತ್ರಣ ನೀಡಿ ತಮ್ಮ ಅಗತ್ಯ ಸಾಧನೆ ಸಲಕರಣೆ ಗಳೊಂದಿಗೆ ಬರಲು ತಿಳಿಸಿದಂತೆ ಕಾಡು ಮನೆ ಜೇನುಗೂಡು ಗಳು ಗಾಜಿನ ಮನೆಯಲ್ಲಿ ನೋಡುಗರಿಗೆ ಕಂಡು ಬರುತ್ತಿವೆ.