ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾ ಹಾಗೂ ತಾಲ್ಲೂಕು ಕುಣಬಿ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ “ಕುಣಬಿ ಉತ್ಸವ 2025–26” ಪ್ರಥಮ ಬಾರಿಗೆ ಇದೇ ಬರುವ ಫೆಬ್ರವರಿ 10, ಮಂಗಳವಾರ ಕುಣಬಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ ಹೇಳಿದರು.
ಅವರು ಜೊಯಿಡಾ ಕುಣಬಿ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ, ವಿಶೇಷವಾಗಿ ಜೋಯಿಡಾ ತಾಲೂಕಿನಲ್ಲಿ ಬಹುಸಂಖ್ಯಾತವಾಗಿ ವಾಸಿಸುತ್ತಿರುವ ಕುಣಬಿ ಸಮಾಜವು ತನ್ನದೇ ಆದ ಶ್ರೀಮಂತ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದೆ. ಕುಣಬಿಗಳ ಆಚಾರ-ವಿಚಾರ, ಸಂಪ್ರದಾಯ, ಹಬ್ಬ-ಹರಿದಿನಗಳು ಹಾಗೂ ಮದುವೆ ಪದ್ಧತಿಗಳನ್ನು ಹೊಂದಿದೆ. ಆದರೆ ಈ ಸಂಸ್ಕೃತಿ ದಿನದಿಂದ ದಿನಕ್ಕೆ ನಶಿಸುತ್ತಿರುವ ಹಿನ್ನೆಲೆ, ಅದನ್ನು ಜಾಗೃತಗೊಳಿಸಿ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸದುದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮವು ತಾಲೂಕು ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೀಳಿಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗೌರವಾನ್ವಿತ ಅತಿಥಿಯಾಗಿ, ಆರ್.ವಿ. ದೇಶಪಾಂಡೆ ಸ್ಥಳೀಯ ಶಾಸಕರು ಘನ ಉಪಸ್ಥಿತಿ ವಹಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ರಮೇಶ್ ತವಡಕರ ಗೋವಾ ಸಚಿವರು, ಆನಂದ ಅಸ್ನೋಟಿಕರ್ ಮಾಜಿ ಮಂತ್ರಿಗಳು, ಟಿ. ಹಿರಾಲಾಲ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ, ಗಣಪತಿ ಉಳ್ವೇಕರ, ಸತಿಶ್ ಶೈಲ್ ಶಾಸಕರು, ರಘುವಿರ ಸ್ವಾಮಿಜಿ, ಸುನಿಲ್ ಹೆಗಡೆ ಮಾಜಿ ಶಾಸಕ , ಎಸ್ ಎಲ್ ಘೋಟ್ನೇಕರ ಮಾಜಿ ಶಾಸಕ, ಎಸ್ ವಾಯ್ ಗುರುಶಾಂತ್, ಬಿ ಮಹೇಂದ್ರ ಕುಮಾರ್, .ಎನ್ ಆರ್ ಶಾಸ್ತ್ರಿ, ಬಿ ಎನ್ ವಾಸರೆ ಆಗಮಿಸುತ್ತಾರೆ ಯ. ಸಮಾಜದ ಸಂಸ್ಥಾಪಕ ಅಧ್ಯಕ್ಷ ಮಾಬಳು ಕುಂಡಲ್ಕರ ಉತ್ಸವದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಉತ್ಸವದಲ್ಲಿ ಕುಣಬಿ ಸಮಾಜದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಪ್ರದಾಯಿಕ ಹಾಡು-ನೃತ್ಯಗಳು, ಹಬ್ಬ-ಹರಿದಿನಗಳು, ಮದುವೆ ಸಂಪ್ರದಾಯಗಳು ಹಾಗೂ ನಾಟಿ ವೈದ್ಯಕೀಯ ಪದ್ಧತಿಗಳನ್ನು ಪ್ರದರ್ಶಿಸುವ ಮೂಲಕ ಸಂಸ್ಕೃತಿ ಸಂರಕ್ಷಣೆಗೆ ಚಾಲನೆ ನೀಡಲಾಗುತ್ತದೆ ಎಂದು ಸುಭಾಷ್ ಗಾವಡಾ ವಿವರಿಸಿದರು.
ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಕುಣಬಿ ಬಾಂಧವರು ಪರಂಪರಾಗತ ಉಡುಗೆ-ತೊಡಗೆ ಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೇಮಾನಂದ ವೇಳಿಪ ಅಧ್ಯಕ್ಷರು ತಾ.ಕು.ಸ, ಮಾಬಳು ಕುಂಡಲಕರ ಅಧ್ಯಕ್ಷ ಸಂಸ್ಥಾಪಕ, ಕೃಷ್ಣಾ ಮಿರಾಶಿ ಉಪಾಧ್ಯಕ್ಷ , ಪ್ರಮುಖರಾದ ದಯಾನಂದ ಕುಮಗಾಳಕರ, ರಾಜೇಶ್ ಗಾವಡಾ, ಪ್ರಸನ್ನ ಗಾವಡಾ, ರವಿ ಮಿರಾಶಿ, ಪ್ರಭಾಕರ ವೇಳಿಪ, ದಿವಾಕರ ಕುಂಡಲಕರ, ಮಾದೇವ ತವಡಕರ, ಪಾಪು ಗಾವಡಾ, ಭಾಲಚಂದ್ರ ಮಿರಾಶಿ, ಅಜಿತ್ ಮಿರಾಶಿ, ಸುಭಾಷ ವೆಳಿಪ ಇದ್ದರು. ಕಾರ್ಯದರ್ಶಿ ಚಂದ್ರಶೇಖರ ಸಾವರಕರ್ ಸ್ವಾಗತಿಸಿ ವಂದಿಸಿದರು.
