ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ಕೃಷಿ ಕ್ಷೇತ್ರದಲ್ಲಿ
ನಡೆಸಿದ ನಿರಂತರ ಪ್ರಯೋಗ ಹಾಗೂ ಸಾಧನೆಯನ್ನು ಗುರುತಿಸಿ, ತಾಲೂಕಿನ ತೊಗಳ್ಳಿ ನಿವಾಸಿ ಪ್ರಸನ್ನ ತಿರುಮಲೇಶ್ವರ ಹೆಗಡೆ ಅವರಿಗೆ ಈ ಬಾರಿಯ ಜಿಲ್ಲಾಮಟ್ಟದ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ ಲಭಿಸಿದೆ.
ಜಿಲ್ಲಾ ಕೃಷಿ ಇಲಾಖೆಯು ‘ಆತ್ಮ’ ಯೋಜನೆಯಡಿ ಪ್ರತಿವರ್ಷ ನೀಡುವ ಈ ಗೌರವವನ್ನು ಫೆಬ್ರವರಿ 1 ರಂದು ಶಿರಸಿಯಲ್ಲಿ ನಡೆದ
ಫಲಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳದಲ್ಲಿ ಪ್ರದಾನ ಮಾಡಲಾಯಿತು. ಶಾಸಕರಾದ ಶಿವರಾಮ ಹೆಬ್ಬಾರ ಹಾಗೂ ಭೀಮಣ್ಣ ನಾಯ್ಕ ಅವರು ಪ್ರಸನ್ನ ಹೆಗಡೆ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಇವರ ಈ ಸಾಧನೆಗೆ ಮುಂಡಗೋಡು ಹಾಗೂ ಶಿರಸಿ ಭಾಗದ ಕೃಷಿಕರು, ಹಿತೈಷಿಗಳು ಹಾಗೂ ಕುಟುಂಬ ವರ್ಗದವರು ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
