ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಕಳೆದ 23 ವರ್ಷಗಳಿಂದ ಸಪ್ತಸ್ವರ ಸೇವಾ ಸಂಸ್ಥೆ ನಡೆಸಿಕೊಂಡು ಬಂದ ಶ್ರೀಮತಿ ಸುಮಂಗಲಾ ದೇಸಾಯಿ ಯಕ್ಷಗಾನ ಮತ್ತು ಜಾನಪದ ಸಾಹಿತ್ಯ ಹಾ ಗೂ ಸಂಗೀತ ಕಲಾವಿದೆಯಾಗಿ 1999 ರಲ್ಲಿ ಉತ್ತರಕನ್ನಡ ಜಿಲ್ಲೆಗೆ ರಂಗಗೀತೆಯಲ್ಲಿ ರಾಜ್ಯ ಮಹಿಳಾ ಪ್ರಶಸ್ತಿ ತಂದ ಸಾಧಕಿ ಆಗಿದ್ದಾಳೆ. ಹಾಗೆಯೇ ಸಂಗೀತಗಾರರಾಗಿ ಸಂಗೀತದಲ್ಲಿ ಅನೇಕ ಪ್ರಶಸ್ತಿ ಪಡೆದಿದ್ದಾರೆ .
ಕದಂಬೋತ್ಸವ, ಕರಾವಳಿ ಉತ್ಸವ, ಭಟ್ಕಳ ಉತ್ಸವ, ಗಡಿನಾಡ ಉತ್ಸವ, ಕನ್ನಡ ಸಂಸ್ಕೃತಿ ಉತ್ಸವ,ಹಾವೇರಿ ಉತ್ಸವ, ಯಕ್ಷಗಾನ ಉತ್ಸವ, ಹಳಿಯಾಳ ಉತ್ಸವ ಜೋಯಿಡಾ ಉತ್ಸವ, ಹಾರ್ನ್ಬಿಲ್ ಹಬ್ಬ ,ಹೀಗೇ ಅನೇಕ ಉತ್ಸವದಲ್ಲಿ ಭಾಗವಹಿಸಿರುಯ್ತಾರೆ. ಇವರಿಗೆ 600 ಕ್ಕು ಹೆಚ್ಚು ಪ್ರಶಸ್ತಿ ಬಂದಿರುತ್ತದೆ.ಹಾಗೇ ಅದರಲ್ಲಿ ಪ್ರಮುಖವಾಗಿ ಬಸವಶ್ರೀ ಪ್ರಶಸ್ತಿ ,ಕನ್ನಡ ಕೋಗಿಲೆ,ಕರುನಾಡ ಕೋಗಿಲೆ,ವಿಶ್ವ ಸಂಗೀತ ರತ್ನ ,ಗಾನ ಕೋಗಿಲೆ ಹೀಗೆ ಹಲವಾರು ಪ್ರಶಸ್ತಿ ಇವರದಾಗಿಸಿಕೊಂಡಿದ್ದಾರೆ. ಹಾಗೆಯೆ ಬೆಳಗಾವಿಯಲ್ಲಿ ರಾಜ್ಯಮಟ್ಟದ “ನುಡಿಹಬ್ಬ” ಕಾರ್ಯಕ್ರಮದಲ್ಲಿ ಕರುನಾಡ ಕೋಗಿಲೆ-2026 ಪ್ರಶಸ್ತಿ ಪಡೆದುಕೊಂಡಿರುತ್ತಾರೆ.
ಜೋಯಿಡಾ ತಾಲೂಕಿಗೆ ಇವರು ಹೆಸರು ತಂದಿರುತ್ತಾರೆ.ಇವರಿಗೆ ತಾಲೂಕಿನ ಅನೇಕ ಗಣ್ಯರು, ದೇಸಾಯಿ ಬಂಧಗಳು, ಸ್ನೇಹಿತರು, ಹಾಗೂ ಜನಪ್ರತಿನಿಧಿಗಳು ,ಕರ್ನಾಟಕ ರಾಜ್ಯ ಬರಹಗಾರ ಸಂಘದ ಅಧ್ಯಕ್ಷರು ಮಧು ನಾಯ್ಕ್ ಸರ್ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.
