ಸುದ್ದಿ ಕನ್ನಡ ವಾರ್ತೆ

. ಮುಂಡಗೋಡ: ತಾಲೂಕಿನ ಪೊಲೀಸ್ ಠಾಣೆಯ ಪಿಎಸ್‌ಐ ಆಗಿದ್ದ ಯಲ್ಲಾಲಿಂಗ್ ಕುನ್ನೂರು ಅವರು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.

ತೀವ್ರ ಅನಾರೋಗ್ಯ ಕಾರಣ ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರು ಎಳೆದಿದ್ದಾರೆ.ಅವರಿಗೆ ಕೇವಲ 33 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು, ಸದ್ಗುಣ ಹಾಗೂ ಪರೋಪಕಾರಿಯಾಗಿ ಸದಾ ನಗುಮೊಗದ ಅಧಿಕಾರಿಯಾಗಿದ್ದ ಅವರು ಠಾಣೆಗೆ ಬಂದ ಸಾರ್ವಜನಿಕರೊಡನೆ ಸದಾ ನಗನಗುತ್ತಲೇ ಮಾತನಾಡಿ ಅವರ ಕುಂದು ಕೊರತೆಗಳನ್ನು ನಿವಾರಣೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಅವರ ಅಕಾಲಿಕ ನಿಧನದಿಂದ ಪೋಲೀಸ್ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖ ವ್ಯಕ್ತವಾಗಿದೆ.

ಸಹೋದ್ಯೋಗಿಗಳು,ಸ್ನೇಹಿತರು ಹಾಗೂ ನಾಗರಿಕರು ಯಲ್ಲಾಲಿಂಗ್ ಕುನ್ನೂರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.