ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಯುವಕರ ಹಾಗೂ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ವಾಗೇಲಿಯಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ NSS ಬಾಯ್ಸ್ ನಗರಬಾವಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗ್ರಾಮೀಣ ತಂಡಗಳು ಭಾಗವಹಿಸಿದ್ದವು. ಸಂಘಟಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು.ಅಂತಿಮ ದಿನದ ಪೈನಲ್ ಪಂದ್ಯದಲ್ಲಿNSS ಬಾಯ್ಸ್ ನಗರಬಾವಿ ಹಾಗೂ ಬಾಮಣೆ ತಂಡಗಳ ನಡುವಿನ ಪಂದ್ಯದಲ್ಲಿ ನಿಗದಿತ ಒವರ್ ನಲ್ಲಿ NSS ಬಾಯ್ಸ್ ನಗರಬಾವಿ ತಂಡವು ಬಾಮಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. NSS ಬಾಯ್ಸ್ ನಗರಬಾವಿ ತಂಡದಲ್ಲಿಯ ಸಚಿನ್ ಎಮ್, ದೇವಾನಂದ ಎಮ್,ಶ್ಯಾಮ ಆರ್,ವಿಶಾಲ ಎಮ್,ವಾಗೇಶ ಆರ್,ಅಜಯ್ ಎಮ್,ರಾಜೇಶ ಎಮ್,ಪಂಕಜ್ ಆರ್,ಪ್ರಾಣೇಶ ಎಮ್,ಆಕಾಶ ಎಮ್,ಸುದರ್ಶನ ಎನ್ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆದ NSS ಬಾಯ್ಸ್ ನಗರಬಾವಿ ತಂಡದವರಿಗೆ ಊರಿನ ಗ್ರಾಮಸ್ಥರು,ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.
