ಸುದ್ದಿ ಕನ್ನಡ ವಾರ್ತೆ

ಫೆಬ್ರವರಿ 7 ರಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರಿಂದ ದಾಂಡೇಲಿ ರೈಲುಸಂಚಾರ ಪ್ರಾರಂಭಿಸಲಾಗುವದು
​ ಕೊರೊನಾ ಸಾಂಕ್ರಾಮಿಕದ ಕಾರಣ ದಿಂದ ಸ್ಥಗಿತಗೊಂಡಿದ್ದ ದಾಂಡೇಲಿ ರೈಲು ಸೇವೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರಂತರ ಪರಿಶ್ರಮದ ಫಲವಾಗಿ ಮತ್ತೆ ಆರಂಭಗೊಳ್ಳುತ್ತಿದೆ.

ಫೆಬ್ರವರಿ 7ನೇ ತಾರೀಕು ಶನಿವಾರ ಸಂಜೆ 4:00 ಗಂಟೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಈ ರೈಲು ಸಂಚಾರವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
​ಈ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಸಂಸದರು, ಕೇಂದ್ರ ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಿ ರೈಲು ಸೇವೆಯನ್ನು ಪುನರಾರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ದಾಂಡೇಲಿ ಭಾಗದ ಜನತೆಗೆ ಹಾಗೂ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಸಂಚಲನ ಮೂಡಲಿದೆ.ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ