ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯ ವಿದ್ಯಾರ್ಥಿನಿಗಳ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯ ಕಾರ್ಯಕ್ರಮ 31/01/2026 ರ ಶನಿವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ನಡೆಯಿತು.

ಇಂದಿನ ಆಧುನಿಕ ಯುಗದ ಮೊಬೈಲ್ ಗೇಮ್ ನ ಭರಾಟೆಯಲ್ಲಿ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳ ಮಹತ್ವ,ಅದರ ನೆನಪನ್ನು ಉಳಿಸಿಕೊಂಡು ಹೋಗುವ ದೃಷ್ಟಿಯಿಂದ ಆಟೋಟಗಳನ್ನು ಶಿಕ್ಷಕ ವೃಂದದವರ,ಹಳೆಯ ವಿದ್ಯಾರ್ಥಿಗಳ,ಪಾಲಕರ,ಪೋಷಕರ,ನಿರ್ಣಾಯಕರ ಸಹಕಾರದಲ್ಲಿ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಆಡಿಸಲಾಯಿತು. ಮಕಡಿ ಖೇಲ:ಲೇಖಾ ಕೃಷ್ಣ ಮಿರಾಶಿ(ಪ್ರಥಮ),ನಮ್ರತಾ ನಾರಾಯಣ ಠಾಕೂರ (ದ್ವಿತೀಯ),ಸಂಪದಾ ತುಕಾರಾಮ ಠಾಕೂರ (ತೃತೀಯ). ಕುಂಟುಬಿಲ್ಲೆ:ಅನಿಕೇತ ಅರುಣ ಸರದೇಸಾಯಿ(ಪ್ರಥಮ)ಮಾನವಿ ದತ್ತ ಕರಂಜೋಳಕರ (ದ್ವಿತೀಯ),ರಾಜಸ ರಾಮನಾಥ ವಾಂತೇಕರ (ತೃತೀಯ ). ಬಾಟಲ್ ಗೆ ಪೆನ್ಸಿಲ್ ಹಾಕುವುದು:ವೈಭವ ನಾರಾಯಣ ಠಾಕೂರ (ಪ್ರಥಮ),ದಿನೇಶ ದೇವಿದಾಸ ಗಾವಡೆ,(ದ್ವಿತೀಯ),ವಿಘ್ನೇಶ ಸಂಜಯ ಗಾಂವಕರ(ತೃತೀಯ). ಗೋಣಿ ಚೀಲ ಓಟ:ವೈಭವ ಬರಪ್ಪ ಹಣಬರ(ಪ್ರಥಮ), ಅಮೋಲ ರಾಜು ಗೋವಿಲಕರ (ದ್ವಿತೀಯ), ರೂಪಾಲಿ ನಾರಾಯಣ ಮಿರಾಶಿ(ತೃತೀಯ). ನಿಂಬೆಹಣ್ಣು ಮತ್ತು ಚಮಚ:ವಿಘ್ನೇಶ ಸಂಜಯ ಗಾಂವಕರ (ಪ್ರಥಮ),ನೈತಿಕ ನಾಮದೇವ ಮಿರಾಶಿ (ದ್ವಿತೀಯ),ಕಾಜಲ ನಾರಾಯಣ ಮಾಜಾಳಕರ(ತೃತೀಯ). ಬುಕ್ ಬ್ಯಾಲೆನ್ಸ್:ಶ್ರಾವಣಿ ನಾರಾಯಣ ಮಿರಾಶಿ(ಪ್ರಥಮ), ವೇದಾಂತ ವಾಸುದೇವ ಕಾಪೋಲಕರ (ದ್ವಿತೀಯ),ರಾಮಾ ಸಂಜಯ ಗಾಂವಕರ(ತೃತೀಯ). ಕಪ್ಪೆ ಓಟ:ಶ್ರಾವಣಿ ನಾರಾಯಣ ಮಿರಾಶಿ(ಪ್ರಥಮ),ಶ್ರಾವಣಿ ತುಕಾರಾಮ ಮಸೂರಕರ (ದ್ವಿತೀಯ),ವೇದಾಂತ ವಾಸುದೇವ ಕಾಪೋಲಕರ (ತೃತೀಯ). ಬಾಲ್ ಇನ್ ದ ಬಕೆಟ್:ಶ್ರಾವಣಿ ತುಕಾರಾಮ ಮಸೂರಕರ (ಪ್ರಥಮ),ಶ್ರಾವಣಿ ನಾರಾಯಣ ಮಿರಾಶಿ(ದ್ವಿತೀಯ),ಸಂಯೋಗ ವಾಂತೇಕರ (ತೃತೀಯ). ಹಗ್ಗಜಗ್ಗಾಟ:ಪ್ರಥಮ ಬಹುಮಾನ ವಿಜೇತ ತಂಡದವರು,ರಾಜ ವಿಷ್ಣು ವಟ್ಲೇಕರ,ನಿಲೇಶ ನಾಮದೇವ ಮಿರಾಶಿ,ಕೋಮಲ ನಾರಾಯಣ ಮಾಜಾಳಕರ,ವಿಶಾಲ ವಾಸುದೇವ ಕಾಪೋಲಕರ, ದ್ವಿತೀಯ ಬಹುಮಾನ ವಿಜೇತ ತಂಡದವರು,ಸಾರ್ಥಕಿ ಸದಾನಂದ ಮಾಜಾಳಕರ,ದಿನೇಶ ದೇವಿದಾಸ ಗಾವಡೆ,ಪ್ರಣವ ಪ್ರಕಾಶ ಪಾಡಕರ ಶಾಲೆಯ ವಿಜೇತ ವಿದ್ಯಾರ್ಥಿಗಳು.

ಈ ಸಂದರ್ಭದಲ್ಲಿ 2025-26 ನೇ ಸಾಲಿನ ಶಾಲೆಯ ಆದರ್ಶ ವಿದ್ಯಾರ್ಥಿ ಕುಮಾರಿ ಸಂಪದಾ ತುಕಾರಾಮ ಠಾಕೂರ,2025-26 ನೇ ಸಾಲಿನ ಶಾಲೆಯ ಅತ್ಯುತ್ತಮ ಕ್ರೀಡಾಪಟು ಕುಮಾರ ಅನಿಕೇತ ಅರುಣ ಸರದೇಸಾಯಿ,2025-26 ನೇ ಸಾಲಿನ ಶಾಲೆಯ ವಿಧೇಯ ವಿದ್ಯಾರ್ಥಿನಿ ಕುಮಾರಿ ನಮ್ರತಾ ನಾರಾಯಣ ಠಾಕೂರ ಬಹುಮಾನ ವಿಜೇತರು. ಶಾಲೆಯ ಕಲಿಕೆಯಲ್ಲಿ ತರಗತಿವಾರು ಮುಂದಿರುವ ವಿದ್ಯಾರ್ಥಿಗಳಾದ ಒಂದನೇಯ ತರಗತಿಯಲ್ಲಿ ಯೊಗೇಶ ಬಾಂಡೋಳಕರ,ಎರಡನೇಯ ತರಗತಿಯಲ್ಲಿ ರಾಮಾ ಗಾಂವಕರ,ಮೂರನೇಯ ತರಗತಿಯಲ್ಲಿ ವೇದಾಂತ ಕಾಪೋಲಕರ,ನಾಲ್ಕನೇಯ ತರಗತಿಯಲ್ಲಿ ಅಮೋಲ ಗೋವಿಲಕರ,ಐದನೇಯ ತರಗತಿಯಲ್ಲಿ ರೂಪಾಲಿ ಮಿರಾಶಿ,ಆರನೇಯ ತರಗತಿಯಲ್ಲಿ ಸಾರ್ಥಕಿ ಮಾಜಾಳಕರ,ಎಳನೇಯ ತರಗತಿಯಲ್ಲಿ ಸಂಪದಾ ಠಾಕೂರ ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಎಸ್ ಡಿ ಎಂ ಸಿ ಹಿರಿಯ ಸದಸ್ಯರಾದ ವಾಸುದೇವ ಕಾಪೋಲಕರ ಅವರು ವೈಯುಕ್ತಿಕ ಪ್ರೋತ್ಸಾಹಕ ಬಹುಮಾನ ವಿತರಿಸಿದರು. ಬಹುಮಾನ ವಿತರಣೆಯ ಸಂದರ್ಭದ ಕಾರ್ಯಕ್ರಮದಲ್ಲಿ ಶಿಂದೋಳಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ,ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ,ನಿವೃತ್ತ ಮುಖ್ಯ ಶಿಕ್ಷಕರಾದ ಹೆಚ್ ಸಿ ಜಾಧವ,ಅಸು ಗ್ರಾಮ ಪಂಚಾಯತ ಸದಸ್ಯರಾದ ನಾಗೇಶ ಕಾಪೋಲಕರ,ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ತನುಜಾ ಮಸರೂಕರ, ಹನುಮಾನಲೇನ್ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ,ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಊರಿನ ಮಿರಾಶಿಗಳಾದ ಯೋಗೇಶ ಮಿರಾಶಿ,ಜಗಲಬೇಟ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಜ್ಯೋತಿಬಾ ಕುಂಬಾರ, ಕಾನೇಕರಲೇನ್ ಶಾಲೆಯ ಸಹ ಶಿಕ್ಷಕಿಯಾದ ಸ್ಮಿತಾ ಜಾಧವ,ಎಸ್ ಡಿ ಎಂ ಸಿ ಸದಸ್ಯರಾದ ವಾಸುದೇವ ಕಾಪೋಲಕರ, ತುಕಾರಾಮ ಠಾಕೂರ,ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ,ಸಹ ಶಿಕ್ಷಕರಾದ ಆನಂದ ಪಿ,ಮಹೇಶ ಮಳಿಕ,ಕ್ಯಾಸಲ್ ರಾಕ್ ಶಾಲೆಯ ಶಿಕ್ಷಕರಾದ ರವಿಚಂದ್ರ ಇನ್ನಿತರ ಪ್ರಮುಖರು ಬಹುಮಾನ ವಿತರಿಸಿದರು.