ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ರಾಮನಗರ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಶಿಂದೋಳಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಿಂದೋಳಿ ಇವರ ಸಂಯುಕ್ತಾಶ್ರಯದಲ್ಲಿ 2025,26 ನೇ ಸಾಲಿನ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ದಿನಾಂಕ:31 ಜನವರಿ 2026 ರ ಶನಿವಾರ ರಾತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂದೋಳಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಮನರಂಜನೆಯ ಕಾರ್ಯಕ್ರಮದಲ್ಲಿ ಅಂಗನವಾಡಿಯ ಮಕ್ಕಳಿಂದ ಪಟಪಟ ಹಾರೋ ಗಾಳಿಪಟ,ದುರಂಧರ ಚಿತ್ರದ ಹಾಡು (ಬಣ್ಣ ಬಣ್ಣದ ಚಿಟ್ಟೆಯ ವೇಷಭೂಷಣ ತೊಟ್ಟು). ನಲಿಕಲಿ ವಿದ್ಯಾರ್ಥಿಗಳಿಂದ ಚಂದಿರನೇತಕೆ ಓಡುವ ನಮ್ಮ ಹಾಡಿನ ಸೊಗಸಾದ ನೃತ್ಯ,ತಾರಕಾ ಮೆಹ್ತಾ ಕಾ ಉಲ್ಟಾ ಚಸಮಾ ಕಾಮೆಡಿ ನೃತ್ಯ. ಮೇರೆ ಸಪನೋಂಕಿ ರಾಣಿ ಹಿಂದಿ ರಿಮಿಕ್ಸ್ ಹಾಡಿನ ನೃತ್ಯ. ಶ್ರೀ ಗಣೇಶ, ವಿಘ್ನ ವಿನಾಶಕನ ನೃತ್ಯ ಐದನೇಯ ತರಗತಿಯ ವಿದ್ಯಾರ್ಥಿಗಳಿಂದ. ಕಾಶ್ಮೀರದ ಪುಲ್ಮಾಂವ ದಾಳಿಯ ಕುರಿತು,ನಂತರದ ಆಪರೇಷನ ಸಿಂಧೂರ ಕುರಿತಾದ ಮನಮೋಹಕ ಸೈನಿಕರ ವೇಷದಲ್ಲಿ ಮನಮೋಹಕ ನೃತ್ಯ. ಪನ್ನಿ ಡಾನ್ಸ್ ಮರಾಠಿ (ಪಾವುಣಾ ಜೆವಲತ್ ಕಾಯಾ)ನಾಲ್ಕನೆಯ ತರಗತಿಯ ವಿದ್ಯಾರ್ಥಿಗಳಿಂದ. ಎಕ್ ದಂತಾಯ ಶ್ರೀ ಗಣೇಶ ದೇವರ ಹಾಡಿನ ನೃತ್ಯ ಎಳನೇಯ ತರಗತಿಯ ವಿದ್ಯಾರ್ಥಿಗಳಿಂದ. ಕಾಸ್ ಕೆ ಜುತಾ ಹಾಡಿನ ನೃತ್ಯ ಐದನೆಯ ತರಗತಿಯ ವಿದ್ಯಾರ್ಥಿಗಳಿಂದ. ಹಾಯೋ ರಬ್ಬಾ ಹಿಂದಿ ಚಿತ್ರಗೀತೆಯ ಪಂಜಾಬಿ ನೃತ್ಯ ಎಳನೇಯ ತರಗತಿಯ ವಿದ್ಯಾರ್ಥಿಗಳಿಂದ. ಪಿಂಗಾ ಗ್ ಪೋರಿ ಮರಾಠಿ ಲಾವಣಿ ನೃತ್ಯ ಆರು ಮತ್ತು ಎಳನೇಯ ತರಗತಿಯ ವಿದ್ಯಾರ್ಥಿಗಳಿಂದ. ಮುಜುಶೇ ಶಾದಿ ಕರೋಗೆ ರಿಮಿಕ್ಸ್ ಲೇಜಿ ಡಾನ್ಸ್ ಎಳನೇಯ ತರಗತಿಯ ವಿದ್ಯಾರ್ಥಿಗಳಿಂದ. ತಾಯಿ ಮತ್ತು ಸೋಸೆ ಅದ್ಬುತವಾದ ಅನಾಥಾಶ್ರಮ ಕುರಿತಾದ ಕಿರು ನಾಟಕದ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಸೊರೆಗೊಂಡಿತು. ಪನ್ನಿ ಡಾನ್ಸ್ ನಾಲ್ಕನೇಯ ತರಗತಿಯ ವಿದ್ಯಾರ್ಥಿಗಳಿಂದ. ಗೆಜ್ಜೆನಾದ ಚಲನಚಿತ್ರದ ಮಲ್ಲಿ,ಮಲ್ಲಿ ಮಿಂಚುಳ್ಳಿ ಗೀತೆಯ ನೃತ್ಯ ಎಳನೇಯ ತರಗತಿಯ ವಿದ್ಯಾರ್ಥಿಗಳಿಂದ. ಕೊನೆಯಲ್ಲಿ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ಕುರಿತಾದ ಲಲ್ಲಾಟಿ ಭಂಡಾರ ಆರನೇಯ ಹಾಗೂ ಎಳನೇಯ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯರೂಪಕ ವಿಶೇಷ ಮೆರಗನ್ನು ನೀಡಿತು. ಆಯಾ ನೃತ್ಯಕ್ಕೆ ಸಂಬಂಧಿಸಿದಂತೆ ವೇಷಭೂಷಣಗಳನ್ನು,ಹೆಜ್ಜೆಗಳನ್ನು ಹಾಕಿದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು.ಸುಮಾರು ಮೂರು ಗಂಟೆಗಳ ಕಾಲ ಮನರಂಜನೆಯ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ,ತರಬೇತಿ, ಮಾರ್ಗದರ್ಶನವನ್ನು ಶಿಕ್ಷಕಿಯಾದ ವಿದ್ಯಾ ಮೇಡಂ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಿವೇದಿತಾ ಮಿರಾಶಿ,ಸುಪ್ರಿಯಾ,ಸಂಜನಾ ಇನ್ನಿತರರು ಅತ್ಯುತ್ತಮವಾಗಿ ನೀಡಿದ್ದರು. ಮನರಂಜನೆಯ ಕಾರ್ಯಕ್ರಮದ ಮಧ್ಯದಲ್ಲಿ ಶಾಲೆಯ ಎಸ್ ಡಿ ಎಂ ಸಿ ಪಾಲಕರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೈಗೆ ಹಗ್ಗದಾಟುವ ಆಟ ಎಲ್ಲರ ಮನ ಗೆದ್ದಿತು. ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿಯ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಂಗನವಾಡಿ ಹಾಗೂ ಶಿಂದೋಳಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ರೂಪಕವಾಗಿ ನೋಟ್ ಬುಕ್ ಜೊತೆ ಪೆನ್ನನ್ನು ವಿತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ಮೂರನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ವಿಜ್ರಂಭಣೆಯಿಂದ ನಡೆದು ಯಶಸ್ಸಿಗೆ ಸಹಕರಿಸಿದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರು,ಪೋಷಕರು,ಹಳೆಯ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರು,ವಿವಿಧ ಕ್ಷೇತ್ರದ ಗಣ್ಯರಿಗೆ,ಪ್ರತ್ಯಕ್ಷ,ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಚಿರಋಣಿ ಎಂದು ಅಭಿನಂದನಾ ನುಡಿಗಳನ್ನಾಡಿದರು.
