ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ತಾಲೂಕಿನ ಗುಂಡಾಳಿ ಶಾಲಾ ಶಿಕ್ಷಕ ಮಹಮ್ಮದ್ ಅಲಿ ಚಪ್ಪರಬಂದ ಅವರ ಅವಿರತ ಅಮೂಲ್ಯ ಸೇವೆಗೆ ಗ್ರಾಮಸ್ಥರಿಂದ ಸನ್ಮಾನ.

ಕಳೆದ 28 ವರ್ಷಗಳಿಂದ ಜೋಯಾಡಾ ತಾಲೂಕಿನ ಅಣಶಿ ಗ್ರಾ. ಪಂ. ವ್ಯಾಪ್ತಿಯ ಗುಂಡಾಳಿ ಕಿ. ಪ್ರಾ. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಚಪ್ಪರಬಂದ ಮಕ್ಕಳ ಪ್ರೀತಿಯ ಗುರುವಾಗಿ ಗ್ರಾಮಸ್ಥರ ಅಚ್ಚುಮೆಚ್ಚಿನ ಶಿಕ್ಷಕರಾಗಿ ತೃಪ್ತಿತ ಸೇವೆ ಸಲ್ಲಿಸುವ ಮೂಲಕ ಇಂದು ನಿವೃತ್ತಿ ಹೊಂದುವ ಮೂಲಕ ಶಿಕ್ಷಣ ಇಲಾಖೆ ಮತ್ತು ಊರ ನಾಗರಿಕರು, ಪಾಲಕರು ಸೇರಿ ಬೀಳ್ಕೋಡುಗೆ ಸಮಾರಂಭ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೋಂಡ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಮಾತನಾಡಿ, ಶಿಕ್ಷಕರ ಸೇವೆಗೆ ಗ್ರಾಮಸ್ಥರ ಪ್ರೋತ್ಸಾಹ, ಸಹಕಾರ ಮುಖ್ಯ. ಗುಂಡಾಳಿ ಗ್ರಾಮಸ್ಥರು ಚಪ್ಪರಬಂದ ಶಿಕ್ಷಕರಿಗೆ ತೋರಿದ ಪ್ರೀತಿ, ಸಹಕಾರ ಇಂದು ಅವರು ನಿರಂತರ 28 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಲು ಪ್ರೇರಣೆಯಾಯಿತು. ಇವರ ಸೇವೆ ಇಲಾಖೆಗೆ ಗೌರವ ತಂದಿದೆ ಎಂದರು.

ಸಾಹಿತಿ ಹಾಗೂ ಅಣಶಿ ಶಾಲಾ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಮಾತನಾಡಿ, ಚಪ್ಪರಬಂದ ಶಿಕ್ಷಕರಲ್ಲಿನ ಮಕ್ಕಳ ಬಗೆಗಿನ ಪ್ರೀತಿ, ಶೈಕ್ಷಣಿಕ ಕಾಳಜಿ ಅವರ ವೃತ್ತಿ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಇವರ ಸೇವೆ ಶಿಕ್ಷರಿಗೆ, ಸಂಘಕ್ಕೆ ಹಾಗೂ ಇಲಾಖೆಗೆ ಗೌರವ ತಂದಿದೆ. ಇವರು ಹಿರಿಯ ಶಿಕ್ಷಕರಾಗಿ ನಮಗೆ ಸ್ಪೂರ್ತಿ ಎಂದರು.

ಸನ್ಮಾನ ಸ್ವಿಕರಿಸಿದ ನಿವೃತ್ತ ಶಿಕ್ಷಕ ಮಹಮ್ಮದ ಅಲಿ ಚಪ್ಪರ ಬಂದ ಮಾತನಾಡಿ, ಈ ಊರಿನ ಜನರು ನನ್ನನ್ನು ಈ ಊರಿನ ಮನೆ ಮಗನಂತೆ ಪ್ರೀತಿ ವಿಶ್ವಾಸದಿಂದ ನೋಡಿಕೊಂಡಿರುವುದರಿಂದ ಸುದೀರ್ಘ 28 ವರ್ಷಕಾಲ ಸೇವೆಯ ಆರಂಭ ಸೇವೆಯ ನಿವೃತ್ತಿ ತನಕ ನಾನು ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಗ್ರಾಮಸ್ಥರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಉದ್ಯಮಿ ರಫೀಖ ಖಾಜಿ, ಜೋಯಿಡಾ ಗ್ರಾ. ಪಂ. ಉಪಾಧ್ಯಕ್ಷ ಸಂತೋಷ ಮಂಥೇರೋ, ಪಿ. ಎಮ್. ಸಿ. ಜೋಯಿಡಾ ಶಾಲಾ ಅಧ್ಯಕ್ಷ ಶ್ಯಾಮ ಪೋಕಳೆ, ಮಾಜಿ ಸೈನಿಕ ಶಿವರಾಮ ಸಾವಂತ, ಕ. ಸಾ. ಪ.ಅಧ್ಯಕ್ಷ ಪಾಂಡುರಂಗ ಪಟಗಾರ, ಗ್ರಾಮದ ಪ್ರಮುಖ ಕೃಷ್ಣಾ ಮಿರಾಶಿ, ರಾಮದಾಸ ದೇಸಾಯಿ, ಶಿಕ್ಷಕರ ಸಂಘದ ಕಾರ್ಯದರ್ಶಿ ಮಾದೇವ ಹಳದನಕರ, ಮುಂತಾದವರು ಉಪಸ್ಥಿತರಿದ್ದರು.

ನೂರಾರು ಗ್ರಾಮಸ್ಥರು, ಶಿಕ್ಷಕರು, ಅಭಿಮಾನಗಳು ನಿವೃತ್ತ ಶಿಕ್ಷಕ ಚಪ್ಪರಬಂದ ರವರಿಗೆ ಶಾಲು ಹಾಕಿ, ಹಣ್ಣು ಹಂಪಲ ನೀಡಿ ಸನ್ಮಾನಿಸಿದರು.