ಸುದ್ದಿ ಕನ್ನಡ ವಾರ್ತೆ

ಶ್ರೀ ಕ್ಷೆತ್ರ ಉಳವಿಯಲ್ಲಿ ಜಿಲ್ಲೆಯ ಅತಿ ದೊಡ್ಡ ಜಾತ್ರೆ ನಡೆಯಲಿದೆ. ಗಂಡು ಮೆಟ್ಟಿನ ಜಾತ್ರೆ ಎಂದೇ ಕರೆಯಲಾಗುವ ಉಳವಿ ಜಾತ್ರೆಯಲ್ಲಿ ಕಂಡು ಬರುವವರೆಲ್ಲ ಹೆಚ್ಚಿನವರು ಉತ್ತರ ಕರ್ನಾಟಕ ದವರು, ಲಕ್ಷಾಂತರ ಜನರುವಾರಗಳ ಕಾಲ ಉಳಿದು ಕೊಳ್ಳಲು ಬೇಕಾದ ಜಾಗ ಉಳವಿ ಯಲ್ಲಿ ಇರುವ ಕಾರಣ ಜಾತ್ರೆಗೆ ಮೆರಗು ಹೆಚ್ಚಿದೆ, ಆದರೆ ಈ ಎಲ್ಲ ಜನರಿಗೂ ಬೇಕಾದ ಮೂಲ ಸೌಕರ್ಯ ವನ್ನು ಉಳವಿ ಗ್ರಾಮ ಪಂಚಾಯತ್ ವ್ಯವಸ್ಥೆ ಮಾಡುತ್ತಿರುವ ಕಾರಣ ಜಾತ್ರೆ ಸುಂದರ ವಾಗಿ ನಡೆಯಲು ಕಾರಣ ವಾಗಿದೆ, ಎಂದರೆ ತಪ್ಪಾಗಲಾರದು.

ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೊಕಾಶಿ ಅವರು ಸ್ನೇಹ ಪ್ರಿಯರು, ಯಾರನ್ನೂ ಯಾವ ಕಾರಣಕ್ಕೂ ಬೇಸರಪಡಿಸಿದವರಲ್ಲ, ಹಾಗಾಗಿ ಕಳೆದ 10 ವರ್ಷ ಗಳಿಂದ ಅವರ ಉಸ್ತುವಾರಿ ಯಲ್ಲಿ ಮತ್ತು ಅವರು ಅಧ್ಯಕ್ಷ ರಾಗಿ ಉಳವಿ ಗ್ರಾಮ ಪಂಚಾಯತ ತುಂಬಾ ಅಭಿವೃದ್ಧಿ ಕಂಡಿದೆ. ಶಾಸಕರು ಮತ್ತು ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರು ಆದಂತಹ ಆರ್ ವಿ ದೇಶಪಾಂಡೆ, ಅವರ ಪರಮ ಭಕ್ತರು, ಅವರ ವಿಶ್ವಾಸ ಪಡೆದವರು ಮಂಜುನಾಥ ಮೊಕಾಶಿ ಅವರು, ಹಾಗಾಗಿ ಎಲ್ಲ ಇಲಾಖೆ ಯವರ ಸಲಹೆ ಪಡೆದುಕೊಂಡು ಲಕ್ಷಾಂತರ ಜನರು ಬರುವ ಜಾತ್ರೆ ಹೇಗೆ ನಡೆಸಬೇಕೆಂಬ ಮಾಹಿತಿ ಅವರಿಗೆ ಕರಗತ ವಾಗಿದೆ,

ಸುಮಾರು 12ಕ್ಕೂ ಹೆಚ್ಚು ಉಳವಿ ಜಾತ್ರೆ ನಡೆಸಿ ಕೊಟ್ಟಿರುವ ಹೆಮ್ಮೆ ಅವರದು, ದೇವಸ್ಥಾನ ನದ ಆಡಳಿತ ಮಂಡಳಿ ಯೊಂದಿಗೆ ನಿರಂತರ ಸಂಪರ್ಕ ಇಟ್ಟು ಕೊಂಡು ಶಾಸಕರು, ಅಧಿಕಾರಿಗಳು, ಮತ್ತು ಸಿಬ್ಬಂದಿ ಗಳನ್ನು ಜಾಗರುಕತೆಯಿಂದ, ಹೇಗೆ ನಡೆಸಿ ಕೊಳ್ಳ ಬೇಕು ಎನ್ನುವ ಎಲ್ಲ ಗುಣಗಳು ಅವರಲ್ಲಿದ್ದು ಅದೇ ಅವರಿಗೆ ಎಲ್ಲ ಜವಾಬ್ದಾರಿ ಗಳನ್ನು ನಿಬಾಯಿಸುವ ಶಕ್ತಿಯನ್ನು ನೀಡುತ್ತಿವೆ ಎಂದರೆ ತಪ್ಪಿಲ್ಲ, ರೂಪಾಯಿ 4 ಕೋಟಿ ಗಿಂತಲೂ ಹೆಚ್ಚಿನ ಮೊತ್ತದಲ್ಲಿ ವಿಸ್ತಾರದಲ್ಲಿ ಮತ್ತು ಉದ್ದದಲ್ಲಿ ಜಿಲ್ಲೆಯ ಮೊಟ್ಟ ಮೊದಲ ಉತ್ತಮ ರಥ ಬೀದಿ ನಿರ್ಮಾಣ ಸಾಧ್ಯ ವಾಗುತ್ತಿರಲಿಲ್ಲ ಹಾಗೇ ಕಾಳಿ ನದಿಗೆ ಶಿವಪುರ ದಲ್ಲಿ ಭಾರಿ ತೂಗು ಸೇತುವೆ ಆಗುತ್ತಿರಲಿಲ್ಲ, ಉಳವಿ ಗ್ರಾಮ ಪಂಚಾಯತ ದ ಹಲವಾರು ಹಳ್ಳಿಗಳಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೊಕಾಶಿ ಅವರ ಶ್ರಮವಿದೆ, ಉಳವಿ ಯಲ್ಲೂ ಕೂಡ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರ ಪ್ರಯತ್ನ ನಡೆಸಿದ್ದಾರೆ. ಎಲ್ಲರೂ ಜಾತ್ರೆ ಗೆ ಬನ್ನಿ ಜಾತ್ರೆ ಚನ್ನಾಗಿ ಮಾಡೋಣ ಎಂದು ಅತ್ಯಂತ ಉತ್ಸಾಹ ದಿಂದ ತಮ್ಮ ಗ್ರಾಮ ಪಂಚಾಯತದ ಸಿಬ್ಬಂದಿ ಗಳೊಂದಿಗೆ ಹಗಲು ರಾತ್ರಿ ಎನ್ನದೇ ತಯಾರಿ ಯಲ್ಲಿ ನಿರತರಾಗಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ ತುಂಬಾ ದೊಡ್ಡದು, ಜನರು ಇರುವ 200 ಎಕರೆಗೂ ಹೆಚ್ಚಿನ ಪ್ರದೇಶ ದಲ್ಲಿ ನಲ್ಲಿ ಇಲ್ಲವೇ ಟ್ಯಾಂಕರ್ ಮೂಲಕ ನೀರು, ಕೊಡುವುದು ಮತ್ತು ಹಲವಾರು ಶೌಚಾಲಯ ಗಳನ್ನು ನಿರ್ಮಿಸಿ ನಿರ್ವಹಿಸುತ್ತಿರುವುದು ತುಂಬಾ ದೊಡ್ಡ ಕೆಲಸ ಅದನ್ನೆಲ್ಲ ಉಳವಿ ಟ್ರಸ್ಟ್ ಜೊತೆಗೆ ಸೇರಿ ವವಸ್ಥೆ ಮಾಡಿಸುತ್ತಿದ್ದಾರೆ. ಗಣ್ಯರನ್ನು, ಅಧಿಕಾರಿಗಳನ್ನು, ಭಕ್ತರನ್ನು ಮತ್ತು ಸ್ವಾಮಿಗಳನ್ನು ಒಂದೇ ಬಾವನೆಯಿಂದ ನೋಡಿ ಕೊಳ್ಳುವವರಿದ್ದರೆ, ಅವರು ಮೊಕಾಶಿ ಯವರು ಮಾತ್ರ ಎಂದು ಹೇಳುತ್ತಾರೆ, ಯಾರೇ ಏನೇ ಕೇಳುವದು ಕೂಡ ಗ್ರಾಮ ಪಂಚಾಯತ ಅಧ್ಯಕ್ಷ ರನ್ನೇ, ಒಟ್ಟಾರೆ ಜಾತ್ರೆಯ ಹೊಣೆ ಹೊತ್ತ ಉಳವಿ ಗ್ರಾಮ ಪಂಚಾಯತ ದ ಜವಾಬ್ದಾರಿ ತುಂಬಾ ದೊಡ್ಡದು, ಅದನ್ನು ಯಶಸ್ವಿಯಾಗಿ ನಡೆಸಿ ಕೊಂಡು ಬರುತ್ತಿರುವ ದೇವಸ್ಥಾನ ದ ಆಡಳಿತ ಮಂಡಳಿಗೂ ಗ್ರಾಮ ಪಂಚಾಯತ ಅಧ್ಯಕ್ಷ ರಿಗೂ ಜನತೆ ದೊಡ್ಡ ಸಲಾಂ ಹೇಳಿದ್ದಾರೆ