ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಶ್ರೀ ಕ್ಷೆತ್ರ ಉಳವಿ ಯಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಫೆ 03 ರಂದು ಮಹಾ ರಥೋತ್ಸವ ನಡೆಯಲಿದ್ದು ಜಿಲ್ಲಾ ಪೊಲೀಸ್ ಇಲಾಖೆ ಭಕ್ತಾದಿಗಳ ಸುರಕ್ಷತೆಗೆ ವಿಶೇಷ ಬಂದೋ ಬಸ್ತ್ ವ್ಯವಸ್ಥೆ ಕೈಕೊಂಡಿದೆ.
ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ಅಡಿ ಯಲ್ಲಿ ಡಿಸ್ಪಿ 1 ಸಿಪಿಐ 6 , 26 ಪಿಎಸ್ಐ ಗಳು 300,ಪೊಲೀಸ್ ರು, 200 ಹೋಮ್ ಗಾರ್ಡ್ಗಳು DAR 2 ಮತ್ತು KSRP, 1ತುಕಡಿ ಗಳನ್ನು ಒಳಗೊಂಡಿವೆ, 4ಆಂಬುಲೆನ್ಸ್ 4ವೈದ್ಯಕಿಯ ಶಿಬಿರ, 1ಅಗ್ನಿಶಾಮಕ ದಳ, 2 ಅಗ್ನಿಶಾಮಕ ಬೈಕ್, ವಾಹನ, 150 ಸ್ವಯಂ ಸೇವಕರು, 100 ಸಿಸಿಟಿವಿ, ಗಳು 10, LED ಸ್ಕ್ರೀನ್ ಗಳು, 5 ವಾಚ್ ಟವರ್ ಗಳು, 8 ಪಾರ್ಕಿಂಗ್ ಸ್ಥಳಗಳು, ಇದ್ದು ಕಣ್ ಗಾವಲಿಗಾಗಿ, ದ್ರೋಣ ಕೆಮೆರಾ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷತೆ ಗಾಗಿ ನಿರಂತರ ಪೆಟ್ರೋಲಿಂಗ್ ನಡೆಸಲಾಗುತ್ತಿದೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ, ಗಳಿಂದ ನುರಿತ ಪೊಲೀಸ್ ರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಧ್ಯಪಾನ ರಹಿತ ಜಾತ್ರೆ ನಡೆಸಲು ಸಕಲ ಸಿದ್ಧತೆ ಮಾಡಿದ್ದಾರೆ. ಒಟ್ಟಾರೆ ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಜಾತ್ರೆಯ ನಂತರ ವಾಹನ ಬಿಡುವುದಕ್ಕೂ ಸಿದ್ಧತೆ ವೇಳೆ ನಿಗದಿ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಕಂಟ್ರೋಲ್ ರೂಮ್ 100, ಜೋಯಿಡಾ ಪಿಎಸ್ಐ, 9480805266,ಸಿಪಿಐ ಜೋಯಿಡಾ 9480805237, ದಾಂಡೇಲಿ DYSP ಫೋನ್ 9480805223 ಸಂಪರ್ಕಿಸಬಹುದು.
