ಸುದ್ದಿ ಕನ್ನಡ ವಾರ್ತೆ
ಬರುವ ದಿನಾಂಕ. 3ರಂದು ಉಳವಿ ಜಾತ್ರೆಯ ಅಂಗವಾಗಿ ಶ್ರೀ ಚನ್ನಬಸವಣ್ಣ ನವರ ಮಹಾ ರಥೋತ್ಸವ ಮಘಾ ನಕ್ಷತ್ರ ದ ಶುಭ ಗಳಿಗೆಯಲ್ಲಿ ಮದ್ಯಾಹ್ನ 4 ಘಂಟೆ ಗೆ ನಡೆಯಲಿದೆ ,ಭಕ್ತರು ರಾಜ್ಯದ ವಿವಿಧ ಜಿಲ್ಲೆ ಗಳಿಂದ ಉಳವಿ ಜಾತ್ರೆ ಗೆ ಬರುತ್ತಿದ್ದಾರೆ , ಕಾಡು ದಾರಿಯಲ್ಲಿ ಭಕ್ತ ರಿಗೆ ಅನುಕೂಲ ವಾಗಲಿ ಎಂದು ಅಲ್ಲಲ್ಲಿ ಅನ್ನ ದಾಸೋಹ ವನ್ನು ಭಕ್ತರು ನೀಡುತ್ತಿದ್ದಾರೆ ಅಂತ ಭಕ್ತ ರಲ್ಲಿ ರುದ್ರ ಗೌಡ ಪಾಟೀಲ್ ಕೂಡ ಒಬ್ಬರು, ಅವರು ಕಿತ್ತೂರ್ ತಾಲೂಕಾ ರಕ್ಸಣಾ ವೇದಿಕೆಯ ಅಧ್ಯಕ್ಷರೂ ಆಗಿದ್ದಾರೆ, ಅವರು ಹೇಳುವಂತೆ ದಾನ ಗಳಲ್ಲಿ ಅನ್ನ ದಾನ ಅತ್ಯಂತ ಶ್ರೇಷ್ಠ ದಾನ ಹಾಗಾಗಿ ದಾರಿಯಲ್ಲಿ ಹೋಗುವ ಪಾದ ಯಾತ್ರಿ ಗಳು, ಎತ್ತಿನ ಬಂಡಿ ಯಲ್ಲಿ ಬರುವವರು ಟ್ರೈಕ್ಟರಿ ಗಳಲ್ಲಿ ಬರುವವರು,
ಭಕ್ತಿಯಿಂದ ನಡೆದು ಬಂದು ಚನ್ನಬಸವಣ್ಣ ನ ದರ್ಶನ ಪಡೆಯುವವ ರಿಗೆಂದು ಈ ಅನ್ನ ದಾನ ನಡೆಸುತ್ತಿದ್ದೇವೆ ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನವಲ್ಗಟ್ಟಿ ಗ್ರಾಮದ ರುದ್ರಗೌಡ ಶಿವನಗೌಡ ಪಾಟೀಲ್ ಅವರು ಹೇಳುತ್ತಾರೆ ಕಳೆದ ಐದು ವರ್ಷ ಗಳಿಂದ ಪಾಟೀಲರು, ಉಳವಿ ಯಾತ್ರಾರ್ಥಿ ಗಳಿಗೆಂದು ನಂದಿಗದ್ದಾ ಪಂಚಾಯತ ವ್ಯಾಪ್ತಿಯ ಮೊರಡಾ ಗ್ರಾಮದ ಉಳವಿ ರಸ್ತೆ ಪಕ್ಕದಲ್ಲಿ ದಾಸೋಹ ನಡೆಸುತ್ತಿದ್ದಾರೆ, ಜಾತ್ರೆಯ ವೇಳೆಯಲ್ಲಿ ಹಸಿದವರ ಹೊಟ್ಟೆ ತಣ್ಣಗಿರಲಿ ಎನ್ನುವ ಉದ್ದೇಶ ಪಾಟೀಲ್ ಅವರದು ಅವರಿಗೆ ಸ್ಥಳೀಯ ವಾಗಿ ನರಸಿಂಹ, ಬಾಗ್ವತ್, ಶ್ರೀಕೃಷ್ಣ ವೇಲಿಪ್, ರವಿಕುಮಾರ್, ಕುಟುಂಬದ ಇತರರು ತುಂಬಾ ಸಹಕಾರ ನೀಡುತ್ತಿದ್ದಾರೆ, ಕುಡಿಯುವ ನೀರನ್ನು ನಿರಂತರವಾಗಿ ನೀಡುತ್ತಿದ್ದಾರೆ, ಪ್ರತಿದಿನ ಸಾವಿರಾರು ಜನರು ಹಗಲು ರಾತ್ರಿ ಎನ್ನದೇ ದಾಸೋಹದಲ್ಲಿ ಉಂಡು ಉಳವಿ ಸೇರುತ್ತಿದ್ದಾರೆ ಪಾಟೀಲ ಜೊತೆಗೆ ಹತ್ತಾರು ಕಾರ್ಯಕರ್ತರು ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ, ತುಂಬಾ ಉತ್ಸಾಹದ ತಂಡ ಅವರಜೊತೆಗೆಬೆಂಗಾವಲಾಗಿ ಇರುವ ಕಾರಣ ಉತ್ತಮ ಸಂಘಟನೆ ಕಾಣುತ್ತಿದೆ ಇವರ ಸೇವೆಗೆ ತುಂಬಾ ಸಹಕಾರ ಕಂಡು ಬರುತ್ತಿದ್ದು ಜನರ ಸೇವೆಯೇ ಜನಾರ್ಧನನ ಸೇವೆ ಎಂದು ಪಾಟೀಲರ ತಂಡ ಕಾಯಕ ಮಾಡುತ್ತಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತನ್ನು ಪಾಟೀಲರ ತಂಡ ನಿಜ ಮಾಡಿದೆ.
