ಸುದ್ದಿ ಕನ್ನಡ ವಾರ್ತೆ

ಬೆಳೆ ವಿಮೆ ಕೊಡಿಸುವಲ್ಲಿ ವಿಫಲವಾದ ರಾಜ್ಯ ಕಾಂಗ್ರೆಸ್ ಸರಕಾರ; ರೈತರಿಗೆ ನ್ಯಾಯ ಒದಗಿಸಲು ಕೇಂದ್ರ ಸರಕಾರದ ಮಧ್ಯ ಪ್ರವೇಶಕ್ಕೆ ಕೋರಿಕೊಂಡ ಸಂಸದ ಕಾಗೇರಿ.
ರೈತರಿಗೆ ಈಗಾಗಲೇ ಬಿಡುಗಡೆಯಾಗಬೇಕಿದ್ದ ಬೆಳೆ ವಿಮೆಯನ್ನು ಕೊಡಿಸುವಲ್ಲಿ ತನ್ನ ನಿಷ್ಕ್ರಿಯತೆಯಿಂದ ವಿಫಲವಾಗಿರುವ ರಾಜ್ಯ ಸರಕಾರದಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ಗಮನಿಸಿ, ನ್ಯಾಯ ಒದಗಿಸಿಕೊಡಲು ಜಿಲ್ಲೆಯ 40,000 ರೈತರಿಗೆ ಬಿಡುಗಡೆಯಾಗಬೇಕಾದ ವಿಮಾ ಹಣವನ್ನು ಕೊಡಿಸಲು ತಕ್ಷಣ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದಿನಾಂಕ 29.01.2026ರಂದು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಸಂಸದ ಕಾಗೇರಿ ಅವರು ರಾಜ್ಯ ಸರ್ಕಾರಕ್ಕೆ ಬರೆದ ಪತ್ರಕ್ಕೆ ಬಂದ ಉತ್ತರದಂತೆ ರಾಜ್ಯ ಸರಕಾರದ ಕೆ ಎಸ್ ಎಮ್ ಎನ್ ಡಿ ಸಿ ನೀಡಿರುವ ಅಂಕೆ ಅಂಶಗಳನ್ನು ವಿಮಾ ಕಂಪನಿ ಪರಿಗಣಿಸದೆ ವಿಮ ಹಣವನ್ನು ನೀಡಲು ಹಿಂದೇಟು ಹಾಕುತ್ತಿರುವುದರ ಕುರಿತು ತೋಟಗಾರಿಕಾ ಇಲಾಖೆಯವರು ಬರೆದ ಪತ್ರವನ್ನು ಉಲ್ಲೇಖಿಸಿ ವಿಶ್ವೇಶ್ವರ ಹೆಗಡೆಯವರು ಕೇಂದ್ರ ಸಚಿವರನ್ನು ಭೇಟಿಯಾಗಿ ರೈತರ ಸಂಕಷ್ಟದ ಕುರಿತು ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಕೃಷಿ ಸಚಿವರು ಫೆಬ್ರುವರಿ ಮೊದಲ ವಾರದಲ್ಲಿ ಈ ಕುರಿತು ಉನ್ನತ ಮಟ್ಟದ ಸಭೆಯನ್ನು ಕರೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.
ಎಂದಿನಂತೆ ಜವಾಬ್ದಾರಿಯನ್ನು ಮತ್ತು ಜನಪರ ಕಾಳಜಿಯನ್ನು ಮರೆತಿರುವ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರುಗಳು ಹಾಗೂ ರಾಜ್ಯ ಕಾಂಗ್ರೆಸ್ ಸರಕಾರ ರೈತರ ನೆರವಿಗೆ ಬಾರದೆ ನಿಷ್ಕ್ರಿಯವಾಗಿದೆ. ಆದರೂ ಸಹ ಕಳೆದ ವರ್ಷ ರೈತರಿಗೆ ಕೇಂದ್ರ ಸರಕಾರದಿಂದ ಆದೇಶ ಮಾಡಿಸಿ ನ್ಯಾಯ ಕೊಡಿಸಿದಂತೆ ಈ ವರ್ಷವೂ ಕೂಡ ವಿಶ್ವೇಶ್ವರ ಹೆಗಡೆಯವರ ಮತ್ತು ಕೇಂದ್ರ ಸರಕಾರದ ಕಾಳಜಿಯಿಂದ ರೈತರಿಗೆ ದೊರಕಬೇಕಾದ ವಿಮ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಿರುವುದನ್ನು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಶ್ಲಾಘಿಸುತ್ತದೆ. ಕೇಂದ್ರ ಬಿಜೆಪಿ ಸರಕಾರದ ರೈತ ಪರವಾದ ಕಾಳಜಿಯಿಂದ ರೈತರಿಗೆ ಸಂಕಷ್ಟಕ್ಕೆ ನೆರವಾಗಲು ಕಾರ್ಯ ನಿರ್ವಹಿಸುತ್ತಿರುವ ಸಂಸದ ಕಾಗೇರಿ ಅವರ ಪ್ರಯತ್ನ ದಿಂದ ಜಿಲ್ಲೆಯ ರೈತರಿಗೆ ಶೀಘ್ರದಲ್ಲಿಯೇ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತೇನೆ.
–ಸದಾನಂದ್ ಭಟ್ ನಿಡಗೋಡ್
ಜಿಲ್ಲಾ ವಕ್ತಾರರು ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ