ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ವಿಜ್ರಂಭಣೆಯಿಂದ ಚಾಲನೆ ನೀಡಿದ್ದು,ಜಾತ್ರೆಯ ಸಂಬಂಧ ವಿವಿಧ ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿದೆ.
ಜಾತ್ರಾ ಮಹೋತ್ಸವದ ಪ್ರಯುಕ್ತ ಬೇರೆ ಬೇರೆ ಊರುಗಳಿಂದ ಭಕ್ತಾಧಿಗಳು ತಮ್ಮ ತಮ್ಮ ದಿನನಿತ್ಯದ ವಸ್ತುಗಳೊಂದಿಗೆ, ಎತ್ತಿನ ಚಕ್ಕಡಿ ಗಾಡಿಗಳೊಂದಿಗೆ ಆಗಮಿಸುತ್ತಿದ್ದಾರೆ.ಹೀಗೆ ಉಳವಿಗೆ ಆಗಮಿಸಿದ ಚಕ್ಕಡಿ ಗಾಡಿಗಳ ಜಾನುವಾರಗಳ ಆರೋಗ್ಯ ತಪಾಸಣೆ,ಚಿಕಿತ್ಸೆಯ ಕಾರ್ಯ ಉಳವಿ ಪಶುವೈದ್ಯಕೀಯ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪ್ರದೀಪ,ಸಿಬ್ಬಂದಿಗಳಾದ ಗಣೇಶ ಎಸ್ ನವರಕರ,ಅರುಣ ಜಿ ಬಿರಂಗತ,ಗುಂದ ಪಶುವೈದ್ಯಕೀಯ ಕೇಂದ್ರದ ಜುಜೇ ಫರ್ನಾಂಡಿಸ ಹಗಲು ರಾತ್ರಿ ನಿರಂತರ ಉತ್ತಮವಾದ ಸೇವೆಯನ್ನು ನೀಡುತ್ತಿದ್ದಾರೆ.
