ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಆಡಾಳಿಯಲ್ಲಿ ಅದ್ಧೂರಿಯಾಗಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲಕ್ಷ್ಮಣ ಜಾಧವರವರು ಧ್ವಜಾರೋಹಣ ನೆರವೇರಿಸಿದರು.ಮಕ್ಕಳು ಶಾಲೆಯ ಪರಿಸರದಲ್ಲಿ ಪ್ರಭಾತ ಪ್ರೇರಿ ನಡೆಸಿದರು.ನಂತರ ದಾನಿಗಳಾದ ಸಂತೋಷ ಹಣಬರ ಮತ್ತು ಪ್ರಕಾಶ ಹಣಬರ ಇವರು ದೇಣಿಗೆಯಾಗಿ ಕುರ್ಚಿಗಳನ್ನು ಶಾಲೆಗೆ ನೀಡಿದರು.

ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಶಿಕ್ಷಕ ವೃಂದದವರು, ಪಾಲಕರು ಶಾಲೆಯ ಪರವಾಗಿ ದಾನಿಗಳನ್ನು ಶಾಲು ಹೊದಿಸಿ ಹಣ್ಣು ಕಾಯಿ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಗುರುನಾಥ ಲಮಾಣಿ ಇವರು ನಮ್ಮ ಸಂವಿಧಾನ ರಚನೆ, ಉದ್ದೇಶ,ಮೂಲಭೂತ ಹಕ್ಕುಗಳು, ಕರ್ತವ್ಯಗಳು,ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಗುರುನಾಥ ಲಮಾಣಿ ಸ್ವಾಗತಿಸಿ,ನಿರೂಪಿಸಿ,ವಂದಿಸಿದರು. ಶಾಲೆಯ ವಿದ್ಯಾರ್ಥಿಗಳ ನೃತ್ಯ ಮತ್ತು ಭಾಷಣಗಳ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಡಾಳಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರಾದ ಗಣೇಶ ಮಿರಾಶಿ, ಸದಸ್ಯರು, ಪಾಲಕರು, ಪೋಷಕರು, ಅಂಗನವಾಡಿ ಕಾರ್ಯಕರ್ತೆ, ಮಕ್ಕಳು ಇದ್ದರು.