ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಅಂಗನವಾಡಿ ಕೇಂದ್ರದಲ್ಲಿ ಸಡಗರ ಸಂಭ್ರಮದಿಂದ 77 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ನಾವು ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.ಗಣರಾಜ್ಯೋತ್ಸವ ನಮ್ಮ ದೇಶ ಭಾರತದ ರಾಷ್ಟ್ರೀಯ ಉತ್ಸವವಾಗಿದೆ,ಈ ದಿನ ಭಾರತದ ಸಂವಿಧಾನ 1950 ರಲ್ಲಿ ಜಾರಿಗೆ ಬಂದಿತು. ಆ ಒಂದು ಸವಿ ನೆನಪಿಗಾಗಿ ಇಂದು ದೇಶಾದ್ಯಂತ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರರವರು ಭಾರತ ಸಂವಿಧಾನದ ಪಿತಾಮಹರು. ಭಾರತ ಸಂವಿಧಾನ ಜನರನ್ನು ಸಶಕ್ತಗೊಳಿಸಿದೆ.ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ.ಭಾರತಕ್ಕೆ ಸಂವಿಧಾನವೇ ಬಹು ದೊಡ್ಡ ಬಲ. ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಸರ್ವೋಚ್ಚ ಕಾನೂನು,ಭಾರತದ ಸಂವಿಧಾನ ಇಡೀ ಜಗತ್ತಿಗೆ ಮಾದರಿ, ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗುಂದ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ತೇಜಾ ಕುಟ್ಟಿಕರ, ಪಾಲಕರು, ಪೋಷಕರಾದ ಸತ್ಯವತಿ ಬಾಂದೇಕರ,ಮಂಜುನಾಥ ಮುಸ್ಕಾರ,ವೀರೇಂದ್ರ ಸಾವರಕರ, ಉಮೇಶ ಕುಟ್ಟಿಕರ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ, ನಿರೂಪಣೆ,ವಂದನೆಯನ್ನು ಅಂಗನವಾಡಿ ಕಾರ್ಯಕರ್ತೆಯರಾದ ಪಿವನ್ ವಾಜ್ ನಡೆಸಿಕೊಟ್ಟರು. ಸಹಾಯಕಿಯಾದ ಶರ್ಮಿಳಾ ಬಾಂದೇಕರ ಸಹಕರಿಸಿದರು.
