ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ಜೋಯಿಡಾ ತಾಲೂಕಿನ ನಂದಿಗದ್ದೆ ರಂಗಮಂದಿರದಲ್ಲಿ ಆಶ್ರಯ ಸಂಸ್ಥೆ ಅವರ ಸಹಯೋಗದಲ್ಲಿ ಆಲೆಮನೆ ಹಬ್ಬ ಕಬ್ಬಿನ ಹಾಲಿನ ಮೇಳವನ್ನು ನಂದಿಗದ್ದೆ ಸಂತ ಅಂಥೋನಿ ಚರ್ಚನ ಧರ್ಮಗುರುಗಳಾದ ರೆಮೆಂದ್ ಫರ್ನಾಂಡೀಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಲೆಮನೆ ಹಬ್ಬ ನಮ್ಮೂರಿನಲ್ಲಿ ನಡೆಸುತ್ತಿರುವ ಆನಂದ ಪ್ರಕಾಶ ಫರ್ನಾಂಡೀಸ್ ಅವರಿಗೆ ಅಭಿನಂದಿಸಿದರು.
ಕಾರ್ಯಕ್ರಮದ ಪಾಲ್ಗೊಂಡು ನಂದಿಗದ್ದೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್ ವಿ ದಾನಗೇರಿ ಮಾತನಾಡಿ ಕಬ್ಬಿನ ಹಾಲು ಔಷಧಿ ಗುಣಗಳನ್ನು ಹೊಂದಿದೆ. ,ಕಾಮಾಲೆಯಂತಹ ರೋಗಗಳಿಗೆ ಕಬ್ಬಿನ ಹಾಲು ರಾಮಭಾಣವಾಗಿದೆ, ಜಾತಿ ಮತ ಬೇಧವಿಲ್ಲದೆ ಕಬ್ಬಿನ ಹಾಲಿನ ಮೇಳ ಮಾಡುತ್ತಿರುವುದು ಸಂತಸ, ಸಂಸ್ಥೆಯ ಎಲ್ಲಾ ಕಷ್ಟಗಳಿಗೆ ನಾನು ಸದಾ ಸ್ಪಂದಿಸುತ್ತೇನೆ ಎಂದರು.
ಉತ್ತರಕನ್ನಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಕೆ ಅಧಿಕಾರಿ ಅಶೋಕ ಗದ್ದಿಗೌಡರ ಮಾತನಾಡುತ್ತಾ ಸಂಘಟನೆ ಮಾಡುವುದು ಬಹಳ ಕಷ್ಟ, ಜನರಿಗೆ ಉಚಿತವಾಗಿ ಕಬ್ಬಿನ ಹಾಲು ನೀಡಿ ನೂರಾರು ಜನರಿಗೆ ಜಾತ್ರೆಯ ಅನುಭನ ನೀಡಿದ ಆಶ್ರಯ ಸಂಸ್ಥೆಗೆ ಅಭಿನಂದನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿ ನಂದಿಗದ್ದೆ ಗ್ರಾಮ ಪಂಚಾಯತ ಇದು ಜೋಯಿಡಾ ತಾಲೂಕಿನ ಸಾಂಸ್ಕೃತಿಕ ನಗರಿ ಎಂದರೆ ತಪ್ಪಾಗಲಾರದು, ವರ್ಷವಿಡಿ ಕಾರ್ಯಕ್ರಮ ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಇರುತ್ತದೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರಲಿ, ಅವಕಾಶ ಸಿಕ್ಕಾಗ ಅದನ್ನು ಉಪಯೋಗಿಸಿಕೊಳ್ಳಬೇಕು, 10 ವರ್ಷಗಳಿಂದ ನಮ್ಮ ಗ್ರಾಮ ಪಂಚಾಯತ ಜನರ ಸೇವೆ ಮಾಡುತ್ತಿದ್ದೇನೆ ನನಗೆ ಈ ಬಗ್ಗೆ ಖುಷಿ ಇದೆ , ಕಬ್ಬಿನ ಹಾಲಿನ ಮೇಳಮಾಡಿದ ಸಂಘಟಕರಿಗೆ ಅಭಿನಂದನೆಗಳು ಎಂದರು.
ಕಾರ್ಯಕ್ರಮದ ನಂತರ ಯಲ್ಲಾಪುರದ ಮಾನಸಾ ತಂಡ ದವರಿಂದ ಆರ್ಕೇಸ್ಟ್ರಾ ನಡೆಯಿತು ಸಾವಿರಾರು ಜನರು ಆನಂದ ಫರ್ನಾಂಡೀಸ್ ಅವರ ಆಶ್ರಯ ಸಂಸ್ಥೆ ಯವರಿಂದ ನಡೆಸಿದ ಉಚಿತ ಕಬ್ಬಿನ ಹಾಲು ಮಂಡಕ್ಕಿ, ಮಿರ್ಚಿಬಜ್ಜಿ ಸೇವಿಸಿ ಆರ್ಕೆಸ್ಟ್ರಾ ನೋಡಿ ಸಂತಸ ಪಟ್ಟರು.
ವೇದಿಕೆಯಲ್ಲಿ ಜೋಯಿಡಾ ಬ್ಲಾಕ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸುಕನ್ಯಾ ದೇಸಾಯಿ ನ್ಯಾಯವಾದಿ ಸೋಮಕುಮಾರ, ದಂಪತಿಗಳುಆನಂದ್ ಪರ್ನಾಂಡಿಸ್ ದಂಪತಿಗಳು ಇತರರು ಉಪಸ್ಥಿತರಿದ್ದರು ಕಾರ್ಯಕ್ರಮ ವನ್ನು ಸಾಹಿತ್ಯ ಪರಿಷತ್ತಿನ ಸದಸ್ಯೆ ಸೀತಾ ದಾನಗೇರಿ, ಮಂಗಲಾ ಉಪಾದ್ಯೆ ನಡೆಸಿ ಕೊಟ್ಟರು.
