ಸುದ್ದಿ ಕನ್ನಡ ವಾರ್ತೆ
ಜೊಯಿಡಾ :ತಾಲೂಕಿನ ಪುಣ್ಯ ಕ್ಷೇತ್ರ ಶ್ರೀ ಚೆನ್ನಬಸವಣ್ಣ ನವರ ಜಾತ್ರೆಗೆ ರಥ ಸಪ್ತಮಿಯಾದ ಇಂದು ಚಾಲನೆ ನೀಡಲಾಯಿತು. ಇಂದಿನಿಂದ ಬರುವ ಫೆಬ್ರವರಿ 5 ರ ವರೆಗೆ ಜಾತ್ರೆ ನಡೆಯಲಿದೆ.ಫೆ 3 ರಂದು ಮದ್ಯಾಹ್ನ 4 ಘಂಟೆಗೆ ಮಹಾ ರಥೋತ್ಸವ ನಡೆಯಲಿದೆ.

ಉಳವಿ ಜಾತ್ರೆಯ ಸಿದ್ಧತೆ ಕುರಿತು ದೇವಸ್ಥಾನದ ಅಧ್ಯಕ್ಷ ಸಂಜಯ್ ಕಿತ್ತೂರು ಅವರ ಅಧ್ಯಕ್ಷತೆಯಲ್ಲಿಪತ್ರಿಕಾ ಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಆಡಳಿತ ಸಮಿತಿ ಯವರು ಜಾತ್ರೆಗೆ ಸಂಬಂದಿಸಿದ ಮಾಹಿತಿ ನೀಡಿದರು. ಬರುವ ಲಕ್ಷಾಂತರ ಜನರಿಗೆ ಕುಡಿಯುವ ನೀರು , ಸಾಕಷ್ಟು ಶೌಚಾಲಯ , ಪಾರ್ಕಿಂಗ್ ವ್ಯವಸ್ಥೆ , ಎತ್ತುಗಳ ಆರೋಗ್ಯಕ್ಕೆ 4 ಆಂಬುಲೆನ್ಸ್ ಸಾಕಷ್ಟು ಡಾಕ್ಟರ ಗಳನ್ನು ನೇಮಕ ಮಾಡಲಾಗಿದೆ. ಸುಮಾರು ಎರಡು ಸಾವಿರ ಚಕ್ಕಡಿ ಗಾಡಿಗಳು ಬರುವ ನಿರೀಕ್ಷೆ ಇದ್ದು ವ್ಯವಸ್ಥೆ ಮಾಡಲಾಗಿದೆ.
ಜಾತ್ರೆಯ ಸುರಕ್ಷತೆ ಬಗ್ಗೆ ಇದೇ ಮೊಟ್ಟ ಮೊದಲ ಬಾರಿಗೆ ರಥ ಬೀದಿಯಲ್ಲಿ ಯಾವುದೇ ಅಂಗಡಿಗಳು ಇರುವುದಿಲ್ಲ. ರಥ ಬೀದಿ ಫುಟ್ಪಾತ್ ಭಕ್ತರ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು. ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಚಕ್ಕಡಿಗಳಿಗೆ ಸರಿಯಾದ ಎರಡು ಎತ್ತುಗಳಿರ ಬೇಕು. ಅವುಗಳಿಗೆ ಮಾದಕ ವಸ್ತುಗಳನ್ನು ಕುಡಿಸುವುದಾಗಲಿ, ಹೊಡೆಯುವುದಾಗಲಿ , ಮಾಡಬಾರದು. ಕುದುರೆ ಗಾಡಿಗಳನ್ನು ತರಬಾರದು ಎಂದು ತಿಳಿಸಿದರು, ಕುಡಿಯುವ ನೀರಿಗೆ ಹಿಂದಿಗಿಂತ ಹೆಚ್ಚಿನ ವ್ಯವಸ್ಥೆ ಮಾಡಿದ್ದೇವೆ . ಡ್ರೋನ್ ಕ್ಯಾಮೆರಾ ಇಟ್ಟಿದ್ದೇವೆ , 4 ಕಡೆ ಟವರ್ ನಿರ್ಮಿಸಿ ದ್ದೇವೆ. ಸ್ವಯಂ ಸೇವಕರನ್ನು ಹಿಂದಿನ ಜಾತ್ರೆಗಿಂತ 2 ಪಟ್ಟು ಹೆಚ್ಚಿಗೆ ಮಾಡಿದ್ದೇವೆ. ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಜೊತೆಗೆ ವಾಕಿ ಟಾಕಿ ವ್ಯವಸ್ಥೆ ಮಾಡಿದ್ದೇವೆ. ವಾಕಿ ಟಾಕಿ ಮೂಲಕ ನಮ್ಮಮತ್ತು ನಮ್ಮವರ ಸಂಪರ್ಕಕ್ಕೆ ಅನುಕೂಲವಾಗಲಿದೆ. ಜಿಲ್ಲಾ ಪೊಲೀಸ್ ಇಲಾಖೆಯ ಆದೇಶದಂತೆ ರಥ ಬೀದಿಯಲ್ಲಿ ಯಾವುದೇ ಅಂಗಡಿ ಇರುವುದಿಲ್ಲ.
ಜನರ ಸುರಕ್ಷತೆಗಾಗಿ 70 ಬ್ಯಾರಿಗೇಟ್ ತರಿಸಿದ್ದೇವೆ. ಎಲ್ಲಾ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ ಎಂದರು. ಅಲ್ಲದೆ 35 ಕೊಠಡಿಗಳ ಯಾತ್ರಿ ನಿವಾಸ ಇಂದು ಉದ್ಘಾಟನೆಯಾಗಿದೆ ಇದಕ್ಕೆ ರೂ 3 ಕೋಟಿಗೂ ಹೆಚ್ಚಿನ ಹಣ ದಾನಿಗಳಿಂದ ಬಂದಿದೆ ಎಂದರು. ಉಳವಿ ಗ್ರಾ ಪಂ ಅಧ್ಯಕ್ಷ ಮಂಜುನಾಥ ಮೊಕಾಶಿ ಮಾತನಾಡಿ ಈ ಜಾತ್ರೆಯನ್ನು ಹಿಂದೆಂದಿಗಿಂತಲೂ ವಿಶೇಷವಾಗಿ ಮಾಡೋಣ , ಶಾಸಕ ಆರ್. ವಿ. ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಯಶಸ್ವಿ ಮಾಡಲು ಸಕಲ ಸಿದ್ಧತೆ ಆಗಿದೆ. ಸದಾ ಕಾಲ ಶಾಸಕರು ಮಾಹಿತಿ ಪಡೆಯುತ್ತಾ ಇದ್ದು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ನಾವು ಗ್ರಾಮ ಪಂಚಾಯತ ದಿಂದ ಎಲ್ಲ ವ್ಯವಸ್ಥೆ ಮಾಡಿ ಕೊಂಡಿದ್ದೇವೆ, ಕುಡಿಯುವ ನೀರು ವಿದ್ಯುತ್ ಆರೋಗ್ಯ ಸೇರಿದಂತೆ ಸಂಬಂಧ ಪಟ್ಟ ಎಲ್ಲ ಇಲಾಖೆಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮದ ವ್ಯವಸ್ಥೆ ಮಾಡಿಕೊಂಡಿದ್ದೇವೆ ಯಾರೇ ಉತ್ತಮ ಸಲಹೆ ನೀಡಿದರೂ ಸ್ವಾಗತ ಎಂದರು.
ಜೊಯಿಡಾ ಪಿಎಸ್ಐ ಮಹೇಶ್ ಮಾಳಿ ಮಾತನಾಡಿ ಇದೇ ಮೊದಲ ಬಾರಿಗೆ ರಥೋತ್ಸವವನ್ನು ನೋಡಲು 10 ಎಲ್.ಈ.ಡಿ ಪರದೆಗಳನ್ನು ವಿವಿದೆಡೆ ಹಾಕಲಾಗಿದೆ. ಇದರಿಂದ ವಯಸ್ಸಾದವರು , ಮಕ್ಕಳು ಕುಳಿತಲ್ಲೇ ಜಾತ್ರೆಯ ರಥೋತ್ಸವವನ್ನು ನೋಡಬಹುದು ಗದ್ದಲದಲ್ಲಿ ಓಡಾಡಲು ಸಾಧ್ಯವಾಗದವರು ಕೂಡ ಎಲ್.ಈ.ಡಿ ಪರದೆ ಮುಂದೆ ನಿಂತು ನೋಡಬಹುದು , ರಥ ಬೀದಿ ಮುಕ್ತವಾಗಿ ಇರಲಿದೆ.ಇದರಿಂದ ಭಕ್ತರಿಗೆ ಮುಕ್ತ ವಾಗಿ ಓಡಾಡಲು ಅನುಕೂಲ ವಾಗಲಿದೆ, ಯಾವುದೇ ಕಳು ವಾದರೆ , ಮಕ್ಕಳು ಕಳೆದು ಹೋದರೆ , ತಿಳಿಸಲು ಅನುಕೂಲವಾಗುವಂತೆ ಕಮಾಂಡಿಂಗ್ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತ್ ಸೂಕ್ತವಾಗಿ ಮಾಡುತ್ತೇವೆ ಎಂದರು.
ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ , ಸದಸ್ಯ ವೀರೇಶ್ ಕಂಬಳಿ ಅವರು ದೇವಸ್ಥಾನವು ಕೈ ಕೊಂಡ ವಿವಿಧ ಕಾರ್ಯಕ್ರಮ ಗಳ ಮಾಹಿತಿ ನೀಡುತ್ತ ಉತ್ತಮವಾಗಿ ಜಾತ್ರೆ ನಡೆಯಲು ಬೇಕಾದ ಸಿದ್ಧತೆಗಳನ್ನು ಕೈ ಕೊಂಡ ಬಗ್ಗೆ ವಿವರಿಸುತ್ತ ಪ್ಲಾಸ್ಟಿಕ್ ಬಳಕೆ ಮಾಡದೇ ಅರಣ್ಯ ನಾಶ ಮಾಡದೇ ಪರಿಸರ ಹಾಳು ಮಾಡದೇ ಜಾತ್ರೆ ಮಾಡೋಣ ಎಂದರು.
ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರ ಸಹಕಾರ ಬಯಸಿದರು.
ವೇದಿಕೆಯಲ್ಲಿ ಅಧ್ಯಕ್ಷ ಸಂಜಯ್ ಕಿತ್ತೂರ ಸದಸ್ಯ ವೀರೇಶ್ ಕಂಬಳಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ ಪ್ರಧಾನ ಅರ್ಚಕ ಶಂಕರಯ್ಯ ಶಾಸ್ತ್ರಿ , ರವಿ ಶಂಕರ ದಾವಣಗೆರೆ , ಸಿದ್ದನಗೌಡ , ಅಡಿವೆಪ್ಪ ಹಾಲಪ್ಪ ಇತರರು ಉಪಸ್ಥಿತರಿದ್ದರು
