ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ರಾಮನಗರ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಶಿಂದೋಳಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಿಂದೋಳಿ ಇವರ ಸಂಯುಕ್ತಾಶ್ರಯದಲ್ಲಿ 2025-26 ನೇ ಸಾಲಿನ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ದಿನಾಂಕ:26- 01-2026 ರ ಸೋಮವಾರ ರಾತ್ರಿ 8.00 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂದೋಳಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಾರ್ಥನೆ,ಸ್ವಾಗತ ಭಾಷಣ,ಕಾರ್ಯಕ್ರಮದ ಉದ್ಘಾಟನೆ,ವರದಿ ವಾಚನ,ಉದ್ಘಾಟಕರ ಭಾಷಣ,ಅತಿಥಿಗಳ ಭಾಷಣ,ಅಧ್ಯಕ್ಷರ ಮಾತು,ಉಪಕಾರ ಸ್ಮರಣೆ,ವಂದನಾರ್ಪಣೆ,ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ವಿದ್ಯಾರ್ಥಿ ವೃಂದದವರು ಅಧ್ಯಕ್ಷರು,ಸರ್ವ ಸದಸ್ಯರು,ಪಾಲಕರು ಎಸ್.ಡಿ.ಎಮ್.ಸಿ ಸ.ಹಿ.ಪ್ರಾ.ಶಾಲೆ ಶಿಂದೋಳಿ,ಜೋಯಿಡಾ ತಾಲೂಕು,ಶಿರಸಿ ಶೈಕ್ಷಣಿಕ ಜಿಲ್ಲೆ ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.