ಸುದ್ದಿ ಕನ್ನಡ ವಾರ್ತೆ

. ಜೋಯಿಡಾ: ಶ್ರೀಸೋಮೇಶ್ವರ ಯುವ ಒಕ್ಕೂಟ ಹಾಗೂ ಊರ ನಾಗರೀಕರ ವತಿಯಿಂದ ಆಯೋಜಿಸಿರುವ ಗಣರಾಜ್ಯೋತ್ಸವದ ಪ್ರಯುಕ್ತ ಸತತ 16ನೇ ವರ್ಷದ ಗ್ರಾಮೀಣ ಆಹ್ವಾನಿತ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವೈದಿಕರಾದ ಹರಿಹರ ಭಟ್ಟ ಶ್ರೀ ಗಣಪತಿ ಸ್ತುತಿಯೊಂದಿಗೆ ಕ್ರಿಕೆಟ್ ಪಂದ್ಯಾವಳಿ ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸಿದರು. ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅರುಣ ದೇಸಾಯಿ ಗ್ರಾಮ ಪಂಚಾಯತ ಅಧ್ಯಕ್ಷರು ನಂದಿಗದ್ದೆ ಕ್ರಿಕೆಟ್ ಪಂದ್ಯಾವಳಿಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಕಳೆದ 15 ವರ್ಷಗಳಿಂದ ಒಗಟ್ಟಿನಿಂದ ಕ್ರೀಡಾ ಕೂಟವನ್ನು ಆಯೋಜನೆ ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆ, ಒಗ್ಗಟ್ಟಿನಲ್ಲಿ ಬಲವಿದೆ, ವೊಳ್ಳೆಯ ಮನಸಿದ್ದರೆ ಏನು ಬೇಕಾದರೂ ಸಾಧಿಸಬಹುದು, ಇದೇ ರೀತಿ ಕ್ರೀಡಾಕೂಟ ನಿರಂತರವಾಗಿ ಮುಂದುವರೆಯಲಿ ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ, ರಾಮಕೃಷ್ಣ ದಾನಗೇರಿ, ಸದಸ್ಯೆ ಶೋಭಾ ಎಲ್ಲೇಕರ್ , ಸುಕನ್ಯಾ ದೇಸಾಯಿ, ಸದಾನಂದ ಉಪಾಧ್ಯ, ಶಾಂತಾರಾಮ್, ರೇವಣ್ಣಸಿದ್ದ, ಮೋಹನ ದೇಸಾಯಿ, ಸಂದೇಶ್ ದೇಸಾಯಿ ಪತ್ರಕರ್ತರು, ರಾಘವೇಂದ್ರ ನಾಯ್ಕ, ರತ್ನಾಕರ ತೆಲೋಲಿ, ಊರ ಪ್ರಮುಖರು ಉಪಸ್ಥಿತರಿದ್ದರು.

ಮೂರು ದಿನಗಳ ನಡೆಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗ್ರಾಮೀಣ ಮಟ್ಟದ ಜೋಯಿಡಾ,ರಾಮನಗರ,ಯಲ್ಲಾಪುರ,ಅಂಕೋಲಾ ಭಾಗಗಳ ಆಹಾನ್ವಿತ ತಂಡಗಳು ಆಗಮಿಸಲಿದೆ,ಕ್ರೀಡಾ ಪಟುಗಳ ಜೊತೆ ಕ್ರೀಡಾಭಿಮಾನಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಮೂರು ದಿನಗಳ ಕಾಲ ಕ್ರೀಡಾ ಪಟುಗಳಿಗೆ, ಕ್ರೀಡಾಭಿಮಾನಿಗಳಿಗೆ ದಾನಿಗಳ ಸಹಾಯದಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ, ಊರಿನ ಪ್ರತಿಯೊಬ್ಬ ಗ್ರಾಮಸ್ಥರು ತಮ್ಮ ತನು ಮನ ಧನದ ಸೇವೆಯನ್ನು ನೀಡಲಿದ್ದು , ಅವುರ್ಲಿ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣ ವಾಗಿದೆ ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಪ್ರಮುಖರಾದ ಅನಿಲ್ ಶೇಟಕರ,ದಿಲೀಪ ದೇವದಾಸ,ಸಂಜಯ ದೇಸಾಯಿ, ಶೇಖರ ಪಾಡಕರ, ಪಂಕಜ್ ಮರಾಠೆ, ಮಾಧ್ಯಮಕ್ಕೆ ತಿಳಿಸಿದ್ದಾರೆ.