ಸುದ್ದಿ ಕನ್ನಡ ವಾರ್ತೆ
ತಾಲೂಕಾ ಕೇಂದ್ರ ಜೋಯಿಡಾ ದಲ್ಲಿರುವ ಸುಂದರ ಪರಿಸರದ ಕ್ರೀಡಾಂಗಣ ದಲ್ಲಿ ನಾಳೆ ಯಿಂದ ಮೂರು ದಿನಗಳ ಕಾಲ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಸರ್ವೋದಯ ಯೂತ್ ಕ್ಲಬ್ ನಗರಿ ಇವರು ಕ್ರಿಕೆಟ್ ಪಂದ್ಯಾವಳಿಯ ಸಂಘಟನೆ ಮಾಡಿದ್ದು ಮೂರು ದಿನಗಳ ಕಾಲ ತಾಲೂಕಿನ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಸಿಗಲಿದೆ. ಪ್ರಥಮ ಬಹುಮಾನ 11,111 ಮತ್ತು ಟ್ರೋಫಿ ದ್ವಿತೀಯ ಬಹುಮಾನ 6111,ಮತ್ತು ಟ್ರೋಫಿ ತೃತೀಯ ಬಹುಮಾನ 3111 ಮತ್ತು ಟ್ರೋಫಿ ಹಾಗೂ ಇನ್ನಿತರ ಆಕರ್ಷಕ ಹಲವಾರು ಬಹುಮಾನ ಗಳಿವೆ, ಮಾಜಿ ಶಾಸಕರಾದ, ಸುನೀಲ್ ಹೆಗಡೆ, ನಗರಿಯ ಗಣ್ಯರಾದ ಆರ್ ಆರ್ ಭಟ್, ಗಿರೀಶ್ ಕೋಟೆಮನೆ, ರಾಮಚಂದ್ರ ಶಾಸ್ತ್ರಿ, ಮರಾಠ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಗಣಪತಿ ದೇಸಾಯಿ ಇವರುಗಳು ವಿಶೇಷ ಪ್ರಾಯೋಜಕರಾಗಿದ್ದು, ಎಲ್ಲರೂ ಕ್ರಿಕೆಟ್ ಪಂದ್ಯಾವಳಿ ಯ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಸಂದೀಪ್ ಗಾವುಡಾ ನಗರಿ ತಿಳಿಸಿದ್ದಾರೆ
