ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ತಾಲೂಕಿನ ಗ್ರಾಮೀಣ ಭಾಗದದಲ್ಲಿ ಕೆ ಎಸ್ ಆರ್ ಟಿ ಸಿ ಸೇವೆಯು ದುರ್ಬಲವಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಿಗೆ ತೆರಳಿದ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ.

ಬಸ್ ಅನ್ನೇ ನಂಬಿ ಬರುವ ಸಾರ್ವಜನಿಕರು, ಶಾಲೆ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಪರದಾಡುವ ಸ್ಥಿತಿ ಸಾಮಾನ್ಯವಾಗಿದೆ. ತಾಲೂಕಿನ ಕಳಚೆಗೆ ಸಂಚಾರ ಮಾಡಿದ್ದ ಡಕೋಟಾ ಬಸ್ ಒಂದು ಹಾಳಾಗಿದ್ದು, ಘಟ್ಟ ಹತ್ತಿ ಮೇಲಕ್ಕೆ ಬರಲಾಗದೇ ಚಾಲಕ-ನಿರ್ವಾಹಕರು ಸಮಸ್ಯೆಗೆ ಸಿಲುಕಿದ್ದರು. ನಂತರ ಗ್ರಾಮಸ್ಥರ ಸಹಕಾರದೊಂದಿಗೆ ಹಗ್ಗದ ಮೂಲಕ ಟ್ರ್ಯಾಕ್ಟರ್ ಒಂದಕ್ಕೆ ಕಟ್ಟಿ ಬಸ್ ಅನ್ನು ಎಳೆದು ಮೇಲಕ್ಕೆ ತರಲಾಯಿತು. ಗ್ರಾಮೀಣ ಭಾಗಗಳಿಗೆ ತೆರಳುವ ಬಸ್‌ಗಳನ್ನು ವ್ಯವಸ್ಥಿತವಾಗಿ ದುರಸ್ತಿಯಲ್ಲಿ ಇಡಬೇಕು. ಪದೇಪದೇ ಕೆಟ್ಟು ನಿಂತು ಪ್ರಯಾಣಿಕರು ಪರದಾಡುವಂತಾಗಬಾರದೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.