ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ
ನಂದಿಗದ್ದೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಹೆಣಕೋಳ ಶಾಲೆಯಲ್ಲಿ ಗುರುವಾರ ಸಂಭ್ರಮದಿಂದ ನಡೆಸಲಾಯಿತು.
ಉಳವಿ ಗ್ರಾಮ ಪಂಚಾಯತ ಸದಸ್ಯ ವಿಷ್ಣು ಬಿರಂಗತ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳ ಕಲಿಕಾ ಹಬ್ಬ ವಿನೂತನ ರೀತಿಯಿಂದ ಆಚರಿಸುತ್ತಿದ್ದು, ಇದು ಮಕ್ಕಳಿಗೆ ಉತ್ತಮ ಕಲಿಕೆಯಾಗಿದೆ ಎಂದರು.
ಮೌಳಂಗಿ ಶಾಲೆಯ ಹಿರಿಯ ಶಿಕ್ಷಕ ಶ್ರೀಕಾಂತ್ ನಾಯ್ಕ ಮಾತನಾಡಿ ಇಲಾಖೆಯಲ್ಲಿ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹೆಣಕೋಳ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ವಾಸು ಬಿರಂಗತರವರು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು. ವೇದಿಕೆಯಲ್ಲಿ ಶಿಕ್ಷಕ ಸಂಘದ ಉಪಾಧ್ಯಕ್ಷ ಶಶಿಕಾಂತ ಕಾಂಬ್ಳೆ, ವಾಮನ ಮಿರಾಶಿ ಅನಂತ ದಾತೋಡ್ಕರ, ವೆಂಕಣ್ಣ ಮಿರಾಶಿ, ವಾಸು ಮೀರಾಶಿ ಮುಂತಾದವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿ ಹಳದಿಪುರ್ ಸ್ವಾಗತಿಸಿದರು ಸಿ ಆರ್ ಪಿ ಸಂಪನ್ಮೂಲ ವ್ಯಕ್ತಿ ಭಾಸ್ಕರ ಗಾಂವಕರ ನಿರೂಪಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಒಟ್ಟೂ 7 ಸ್ಪರ್ಧೆಗಳಲ್ಲಿ ಕ್ಲಸ್ಟರ್ ನ 12 ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನಾ ಪತ್ರ ನೀಡಲಾಯಿತು. ನಿರ್ಣಾಯಕರಿಗೂ ಸಹ ಅಭಿನಂದನಾ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಬೆಳಿಗ್ಗೆ ಚಹಾ,ಉಪಹಾರ ಹಾಗೂ ಮಧ್ಯಾಹ್ನ ಶುಚಿ-ರುಚಿಯಾದ ಊಟದ ವ್ಯವಸ್ಥೆಯನ್ನು ಹೆಣಕೋಳ ಶಾಲೆಯ ಎಸ್ ಡಿ ಎಂ ಸಿ ಯವರು,ಪಾಲಕರು,ಪೋಷಕರು ಅತ್ತ್ಯುತ್ತಮವಾಗಿ ಮಾಡಿದ್ದರು. ಹೆಣಕೋಳ ಶಾಲಾ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
