ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಪಟ್ಟಣದಲ್ಲಿ ಗ್ರಾಮದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಪ್ರಥಮ ಹೊರ ಮಂಗಳವಾರವನ್ನು ಆಚರಿಸಲಾಯಿತು.

ಪಟ್ಟಣದ ನಿವಾಸಿಗಳು ಬೆಳಗ್ಗೆ 10ರೊಳಗೆ ಮನೆಗಳಲ್ಲಿ ದೇವರ ಪೂಜೆ ಸಲ್ಲಿಸಿ, ದೀಪ ಹಚ್ಚಿಟ್ಟು, ನೈವೇದ್ಯ ಇಟ್ಟು ಮನೆಯ ಬಾಗಿಲು ಹಾಕಿ ಹೊರ ಭಾಗದಲ್ಲಿ ಕಾಲ ಕಳೆದರು.

ಸಂಜೆಯವರೆಗೆ ಮನೆಯ ಹೊರಗೆ, ಸಮೀಪದ ಉದ್ಯಾನವನ, ಪಿಕ್‌ನಿಕ್ ಸ್ಪಾಟ್‌ಗೆ ಮನೆಮಂದಿಯಲ್ಲ ತೆರಳಿ ಹೊರಮಂಗಳವಾರ ಆಚರಿಸಿದರು. ಪಟ್ಟಣದ ಐಬಿ ಮಕ್ಕಳೋದ್ಯಾನ, ಎಪಿಎಂಸಿ ಬಳಿಯ ಅರಣ್ಯ ಇಲಾಖೆಯ ಉದ್ಯಾವನಗಳಲ್ಲಿ ನೂರಾರು ಕುಟುಂಬದವರು ಸಂತೋಷದಿಂದ ಕಾಲ ಕಳೆಯುವುದು ಕಂಡುಬಂತು.

ಕವಡಿಕೆರೆ, ಮಾಗೋಡ ಜಲಪಾತ, ಸಾತೊಡ್ಡಿ ಜಲಪಾತ, ಜೇನುಕಲ್ಲುಗುಡ್ಡ ಮುಂತಾದ ಪ್ರವಾಸೀ ತಾಣಗಳಲ್ಲಿಯೂ ಅಪಾರ ಪ್ರಮಾಣದಲ್ಲಿ ಜನ ಸೇರಿದ್ದರು.

ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ ಮುಂಗಟ್ಟುಗಳೆಲ್ಲಾ ಬಂದ್ ಆಗಿದ್ದವು. ಜನರ, ವಾಹನಗಳ ಓಡಾಟ ವಿರಳವಾಗಿತ್ತು.