ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ರಾಮನಗರದಲ್ಲಿ ಮಂಗಳವಾರ ನಡೆದ ಶ್ರೀ ರಮಾನoದಾಚಾರ್ಯ ನರೇಂದ್ರಚಾರ್ಯಸ್ವಾಮೀಜಿ ಅವರ ಪಾದುಕಾ ದರ್ಶನ, ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಸಂಪನ್ನಗೊಂಡಿತು. ಸುಮಾರು ಐದು ಸಾವಿರಕ್ಕಿಂತ ಹೆಚ್ಚಿನ ಭಕ್ತರು ಗುರುವಂದನೆಗೆ ಸಾಕ್ಸಿ ಯಾದರು.ಹಳಿಯಾಳ ಜೋಯಿಡಾ ದ ಮಾಜಿ ಶಾಸಕರಾದ ಸುನಿಲ ಹೆಗಡೆ, ರಾಮನಗರ ಗ್ರಾಮ ಪಂಚಾಯತ ಅಧ್ಯಕ್ಷ ಶಿವಾಜಿ ಗೋಸಾವಿ, ಎ ಎಸ್ ಐ ದೊಡ್ಮನಿ, ಸಂಸ್ಥಾನದ ಕಾರ್ಯದರ್ಶಿ ಮಾಳೆ, ಗೋವಾ ಸಹ ಪೀಠ ಪ್ರಮುಖ ಅವಿನಾಶ ಜಾಗೋಸ್ಟೆ, ಶ್ರೀಶೈಲ ಕಾಳೆ, ಉತ್ತರ ಕನ್ನಡ ಜಿಲ್ಲಾ ನಿರೀಕ್ಷೆಕ ಸದಾನಂದ ನಾಯ್ಕ್, ಸಂಸ್ಥಾನದ ಪ್ರವಚನಕಾರ ವಜ್ರಕಾಂತ್ ದಾಸ್ ಮಹಾರಾಜ್, ಉತ್ತರ ಕನ್ನಡ ಜಿಲ್ಲಾ ಪೂರ್ವ ಅಧ್ಯಕ್ಷ ವಿಕಾಸ ವೇಲಿಪ್ ಸೋಮದೇ ಸರ್, ಪಾದುಕಾ ದರ್ಶನ ಕಮಿಟಿ ಅಧ್ಯಕ್ಷ ಮಹಾದೇವ ಪಾಲೆಕರ, ಗೋವಾ ಪೀಠ ಪ್ರಮುಖ ರೂಪೇಶ್ ನಾಯ್ಕ್, ಗಣ್ಯರು ಸಭೆ ಯಲ್ಲಿ ಉಪಸ್ಥಿತರಿದ್ದರು, ರಾಮನಗರ ಜನತೆ ಗ್ರಾಮ ಪಂಚಾಯತ್ ದವರು ತುಂಬಾ ಸಹಕಾರ ನೀಡಿದ್ದರು, ಈ ಸಂದರ್ಭದಲ್ಲಿ ಜನತೆಯ ಪರವಾಗಿ ಆರೋಗ್ಯ ಶಿಬಿರ ನಡೆದು ಸಾರ್ವಜನಿಕ ರು ಲಾಭ ಪಡೆದುಕೊಂಡರು. 10 ಬಡ ಮಹಿಳೆಯರಿಗೆ, ಉಚಿತವಾಗಿ ಹೊಲಿಗೆ ಯಂತ್ರ ಗಣ್ಯರು ನೀಡಿದರು, ಜೊತೆಗೆ 86 ಜನರಿಗೆ ಉಪಾಸಕ ದೀಕ್ಷೆ ನೀಡಲಾಯಿತು, ತುಂಬಾ ಸಂಭ್ರಮದ ಕಾರ್ಯಕ್ರಮ ಕ್ಕೆ ಜನತೆ ನೀಡಿದ ಸಹಕಾರಕ್ಕೆ ಸಂಘಟಕರು ಧನ್ಯವಾದ ಗಳನ್ನು ಅರ್ಪಿಸಿದ್ದಾರೆ ಸಂಘಟನೆಯಲ್ಲಿ ಪ್ರಮುಖ ರಾದ, ಪ್ರಕಾಶ್ ವೇಲಿಪ್, ಪೂಜಾ ಗಾವುಡಾ, ತಾಲೂಕು ಅಧ್ಯಕ್ಷ ಸುರಂದ್ರ ಮಿರಾಶಿ ಪ್ರವೀಣ್ ದೇಸಾಯಿ, ಸಂದೀಪ್ ಗಾವುಡಾ ನಗರಿ, ಸಂಜೀವನಿ, ವಸಂತ ಗಾoವ್ಕಾರ್, ದಯಾನಂದ್ ಮಿರಾಶಿ ಇತರರು ತಮ್ಮ ಉತ್ತಮ ಸಂಘಟನೆ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿ ಕೊಟ್ಟರು.