ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾಡಳಿತ,ಜಿಲ್ಲಾ
ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಜೋಯಿಡಾ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಜೋಯಿಡಾ, ಸಮೂಹ ಸಂಪನ್ಮೂಲ ಕೇಂದ್ರ,ಅನಮೋಡ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗೌಡಸಾಡ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಅನಮೋಡ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಕಲಿಕಾ ಹಬ್ಬ 20 ಜನವರಿ 2026 ರ,ಮಂಗಳವಾರರಂದು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗೌಡಸಾಡದಲ್ಲಿ ಎಫ್ ಎಲ್ ಎನ್ ಕಲಿಕಾ ಹಬ್ಬ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಲಿಕಾ ಹಬ್ಬದ ಸ್ಪರ್ಧೆಯಲ್ಲಿ 1ರಿಂದ 5 ನೇಯ ತರಗತಿಯ ವಿದ್ಯಾರ್ಥಿಗಳಿಗೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಚಟುವಟಿಕೆಯ ಬಲವರ್ಧನೆಗೆ ಪೂರಕವಾಗಿ ಪೋಷಕರೊಂದಿಗೆ ಮೋಜಿನ ಆಟ,ಕಥೆ ಹೇಳುವುದು, ಗಟ್ಟಿಯಾಗಿ ಓದುವುದು, ಸಂತೋಷದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ,ಕೈ ಬರಹ,ರಸಪ್ರಶ್ನೆ ಸ್ಪರ್ಧೆಗಳಲ್ಲಿ ಅನಮೋಡ ಕ್ಲಸ್ಟರಿನ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ಅನಮೋಡ ಕ್ಲಸ್ಟರಿನ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರು ಅತ್ತ್ಯುತ್ತಮ ಸಹಕಾರ ನೀಡಿದರು. ಸಮಾರೋಪ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ರವರು ಮಾತನಾಡಿ ಕಲಿಕೆಯನ್ನು ಆನಂದಮಯ ಮತ್ತು ಒತ್ತಡ ರಹಿತ ಚಟುವಟಿಕೆಯಾಗಿ ಪರಿವರ್ತಿಸುವುದು,ಇದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗುತ್ತದೆ,ಆತ್ಮವಿಶ್ವಾಸ ಮೂಡುತ್ತದೆ,ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಯುತ್ತದೆ.ಮಕ್ಕಳ ಕಲಿಕಾ ಕೊರತೆಯನ್ನು ನೀಗಿಸಲು, ಪೋಷಕರು,ಶಿಕ್ಷಕರು ಮತ್ತು ಸಮುದಾಯವನ್ನು ಒಳಗೊಳ್ಳಲು ಸಹಾಯ ಮಾಡುತ್ತದೆ. ಕಲಿಕೆಯನ್ನು ಶಾಲೆಯಲ್ಲದೆ ಮನೆ ಮನೆಗಳಲ್ಲಿ ನಿರಂತರವಾಗಿ ಬೆಳೆಯುವಂತೆ ಪ್ರೇರೇಪಿಸುತ್ತದೆ.ಕಲಿಕಾ ಹಬ್ಬವು ಮಕ್ಕಳ ಸಮಗ್ರ ವಿಕಾಸಕ್ಕೆ ಮತ್ತು ಕಲಿಕೆಯನ್ನು ನಿತ್ಯೋತ್ಸವನ್ನಾಗಿ ಮಾಡಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಭಾಗವಹಿಸಿ ಮಾತನಾಡಿದ ಅನಮೋಡ ಸರ್ಕಾರಿ ಪ್ರೌಢಶಾಲೆಯ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾದ ವಿದ್ಯಾ ಪೂಜಾರರವರು ಮಾತನಾಡಿ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸಲು ಅವರಲ್ಲಿನ ಸೃಜನಾತ್ಮಕತೆ ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಲು ಕಲೆ,ಸಂಗೀತ,ಆಟಗಳ ಮೂಲಕ ಸಂತೋಷದಾಯಕ ಕಲಿಕೆಯನ್ನು ಒದಗಿಸುವ ಒಂದು ಶಿಕ್ಷಣ ಇಲಾಖೆಯ ಉತ್ತಮ ಕಾರ್ಯಕ್ರಮವಾಗಿದೆ. ಕಲಿಕಾ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮದ ಭಾಗವಾಗಿದೆ,ಕಲಿಕಾ ಹಬ್ಬವು ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಿ,ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುವ ಒಂದು ವಿಶಿಷ್ಟ ಹಬ್ಬವಾಗಿದೆ ಎಂದು ಹೇಳಿದರು. ಅನಮೋಡ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಹೆಚ್ ಭಾಗವಾನರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಸಹಕಾರ,ಪ್ರೋತ್ಸಾಹ ಮಾರ್ಗದರ್ಶನ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ,ಸಮುದಾಯದ ಎಲ್ಲರಿಗೂ ಕ್ಲಸ್ಟರಿನ ಪರವಾಗಿ ಧನ್ಯವಾದಗಳ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನಾ ಪತ್ರ ವಿತರಿಸಲಾಯಿತು.ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ಸಹಕಾರ ನೀಡಿದರು. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಿಗೆ, ಅನಮೋಡ ಕ್ಲಸ್ಟರಿನ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ನಿರ್ಣಾಯಕರಿಗೆ, ವಿದ್ಯಾರ್ಥಿಗಳಿಗೆ ಎಲ್ಲರಿಗೂ ಅಚ್ಚುಕಟ್ಟಾದ ಶುಚಿ-ರುಚಿಯಾದ ಊಟದ ವ್ಯವಸ್ಥೆಯನ್ನು ಗೌಡಸಾಡ ಶಾಲಾ ಶಿಕ್ಷಕರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರ,ಪೋಷಕರ ಸಹಕಾರದಲ್ಲಿ ಮಾಡಿದ್ದರು. ಗೌಡಸಾಡ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಎಸ್ ಡಿ ಎಂ ಸಿ,ಹಳೆ ವಿದ್ಯಾರ್ಥಿಗಳ ಸಂಘ,ಶಿಕ್ಷಕ ವೃಂದ,ವಿದ್ಯಾರ್ಥಿ ವೃಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ,ಸಮೂಹ ಸಂಪನ್ಮೂಲ ವ್ಯಕ್ತಿಗಳು, ಅನಮೋಡ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು,ಸಹ ಶಿಕ್ಷಕ ವೃಂದದವರು, ಸಮಸ್ತ ವಿದ್ಯಾರ್ಥಿ ವೃಂದದವರು ಯಶಸ್ಸಿನ ಕಾರ್ಯಕ್ರಮಕ್ಕೆ ಅತ್ತ್ಯುತ್ತಮ ಸಹಕಾರ ನೀಡಿದರು. ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಗೌಡಸಾಡ ಶಾಲೆಯ ಸಹ ಶಿಕ್ಷಕಿಯಾದ ಕಾವ್ಯ ಮಡಿವಾಳ ಅತ್ಯುತ್ತಮವಾಗಿ ನಿರೂಪಿಸಿ,ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ,ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.
