ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ಆಲೆಮನೆ ಹಬ್ಬ ನಂದಿಗದ್ದೆಯಲ್ಲಿ ಬರುವ ದಿನಾಂಕ. 24 ರಂದು ನಡೆಯಲಿದೆ. ಅಂದು ಶನಿವಾರ ಸಾಯಂಕಾಲ 5 ಘಂಟೆಗೆ ಆಲೇಮನೆ ಹಬ್ಬದ ಉದ್ಘಾಟನೆ ಮತ್ತು ಅದೇ ವೇದಿಕೆಯಲ್ಲಿ ಆಲೆಮನೆ ಹಬ್ಬ ವನ್ನು ಸಂಘಟನೆ ಮಾಡಿದ ಆನಂದ್ ಎಂ ಪರ್ನಾಂಡಿಸ್ ಅವರು ಸ್ಥಾಪಿಸುತ್ತಿರುವ, ಅಶ್ರಯ, ಎಂಬ ಸಂಸ್ಥೆಯ ಉದ್ಘಾಟನೆ ಕೂಡ ನಡೆಯಲಿದೆ. ಕಾರ್ಯಕ್ರಮ ವನ್ನು ಗುಂದ ಚರ್ಚ್ ನ ಧರ್ಮ ಗುರುಗಳಾದ ಫಾಧರ್ ರೇಮೆಂದ ಫರ್ನಾoಡಿಸ್ ಮತ್ತು ಅಲ್ಫಾಸಂಖ್ಯಾತರ ಇಲಾಖೆ ಯ ಅಧಿಕಾರಿ ಅಶೋಕ ಡಿ ಗದ್ದಿಗೌಡರ ಅವರು ಉದ್ಘಾಟಿಸುವರು.

ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ನಂದಿಗದ್ದಾ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ವಹಿಸುವರು ಮುಖ್ಯ ಅತಿಥಿ ಗಳಾಗಿ ಗಣ್ಯರಾದ, ಆರ್ ವಿ ದಾನಗೇರಿ, ಆರ್ ಎಫ್ ಓ, ನೀಲಕಂಠ ದೇಸಾಯಿ, ದಾಂಡೇಲಿ ಯ ರೋಷನ್ ಬಾವಾಜಿ, ನ್ಯಾಯವಾದಿ ಗಳಾದ, ಸೋಮಕುಮಾರ, ಮತ್ತು ಅನಿತಾ,ಎಸ್, ಜೆ ಡಿ ಎಸ್ ಅಧ್ಯಕ್ಷ ಅಜಿತ್ ತೋರತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಗ್ರಾಮ ಪಂಚಾಯತ ಸದಸ್ಯೆ ಶೋಭಾ ಎಲ್ಲೆಕರ್, ರಾಧಾ ದಾನಗೇರಿ ಉಪಸ್ಥಿತರಿರುವರು. ಬೇಕಾದಷ್ಟು ಕಬ್ಬಿನ ಹಾಲು ಕುಡಿಯಿರಿ, ಜೊತೆಗೆ ವಿವಿಧ ರೀತಿಯ ತಿಂಡಿಗಳ ಸ್ಥಾಲ್, ಗಳಿದ್ದು ಬೇಕಾದ ತಿಂಡಿ ತಿನಿಸು ಸವಿಯುತ್ತ, ಆರ್ಕೆಸ್ಟ್ರಾ ಕಲಾವಿದೆ ಯಲ್ಲಾಪುರದ ಮಾನಸಾ ಸಂಗಡಿಗರ ಸಂಗೀತ ಸಂಜೆ ಯ ಸವಿಯನ್ನು ಸವಿಯಲು ಎಲ್ಲರೂ ಬನ್ನಿ ಎಂದು ಸಂಘಟಕ ಆನಂದ ಎಂ ಪರ್ನಾಂಡಿಸ್ ತಿಳಿಸಿರುತ್ತಾರೆ.