ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾಡಳಿತ,ಜಿಲ್ಲಾ
ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ,ಅನಮೋಡ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗೌಡಸಾಡ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಅನಮೋಡ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಕಲಿಕಾ ಹಬ್ಬ 20 ಜನವರಿ 2026 ರ,ಮಂಗಳವಾರರಂದು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗೌಡಸಾಡದಲ್ಲಿ ಎಫ್ ಎಲ್ ಎನ್ ಕಲಿಕಾ ಹಬ್ಬಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಅನಮೋಡ ಕ್ಲಸ್ಟರಿನ ಮುಖ್ಯ ಶಿಕ್ಷಕರ,ಸಹ ಶಿಕ್ಷಕರ ವೃಂದ,ವಿದ್ಯಾರ್ಥಿಗಳು,ಗೌಡಸಾಡ ಶಾಲೆಯ ಶಿಕ್ಷಕ ವೃಂದದವರು, ಪಾಲಕರು,ಪೋಷಕರು,ವಿದ್ಯಾರ್ಥಿಗಳ ಜೊತೆಗೆ ವಾದ್ಯಗಳೊಂದಿಗೆ ಹೆಜ್ಜೆ ಹಾಕಿ ಗೌಡಸಾಡ ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ, ವಿದ್ಯಾರ್ಥಿಗಳು ವಿವಿಧ ಮುಖವಾಡ, ವಿದ್ಯಾರ್ಥಿನಿಯರು, ಮಾತೆಯರು ಗ್ರಾಮೀಣ ಅಲಂಕೃತ ಪೋಷಾಕುನೊಂದಿಗೆ ಪೂರ್ಣ ಕುಂಭ ಹೊತ್ತು ಭವ್ಯವಾದ ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು. ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ಕ್ಲಸ್ಟರಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು,ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ನಿರ್ಣಾಯಕರು ಸೇರಿದಂತೆ ಕಾರ್ಯಕ್ರಮದ ಗಣ್ಯರು ಒಳಗೊಂಡಂತೆ ಪಾಲಕರು,ಪೋಷಕರ ಸಮ್ಮುಖದಲ್ಲಿ ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಸ್ವಾಗತ ಗೀತೆ,ಕಲಿಕಾ ಹಬ್ಬದ ಹಾಡನ್ನು ಹಾಡಿದರು. ಕಾರ್ಯಕ್ರಮದ ವೇದಿಕೆಯ ಮೇಲಿನ ಗಣ್ಯರನ್ನು ವಿದ್ಯಾರ್ಥಿಗಳಿಂದ ಹೂ ಗುಚ್ಛವನ್ನು ನೀಡುವುದರ ಮೂಲಕ ಗೌಡಸಾಡ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾದ ಪ್ರತಿಭಾ ಗೌಡ ಆತ್ಮೀಯವಾಗಿ ಸ್ವಾಗತಿಸಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌಡಸಾಡ ಶಾಲೆಯ ಮುಖ್ಯ ಪ್ರಭಾರ ಮುಖ್ಯ ಶಿಕ್ಷಕಿಯಾದ ಪ್ರತಿಭಾ ಗೌಡ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಾವಳಿ, ವಾರ್ಷಿಕ ಕ್ರಿಯಾ ಯೋಜನೆಯಂತೆ ಪ್ರತಿ ಕ್ಲಸ್ಟರಿನ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳು ಕಲಿಕೆಯ ಎಫ್ ಎಲ್ ಎನ್ ಕಲಿಕಾ ಹಬ್ಬದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡುವುದು, ಆನಂದಮಯ ಕಲಿಕೆ,ಅಡಿಪಾಯ ಸಾಕ್ಷರತೆ, ಸೃಜನಾತ್ಮಕತೆ,ಸಮುದಾಯದ ಸಹಭಾಗಿತ್ವ,ಕಲಿಕಾ ಚೇತರಿಕೆಗೆ ಪ್ರೇರಣೆ ನೀಡುವುದೇ ಕಲಿಕಾ ಹಬ್ಬದ ಉದ್ದೇಶಗಳಾಗಿವೆ, ಕಲಿಕಾ ಹಬ್ಬ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅನಮೋಡ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಹೆಚ್ ಭಾಗವಾನ ಸರ್ ರವರು ಮಾತನಾಡಿ ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿಸಲು,ಕಲಿಕೆಯನ್ನು ಒತ್ತಡವಿಲ್ಲದ ಸಂತೋಷದಾಯಕ ಚಟುವಟಿಕೆಯಾಗಿ ಪರಿವರ್ತಿಸಲು ಸರ್ಕಾರಿ ಶಾಲೆಗಳಲ್ಲಿ ಆಯೋಜಿಸಲಾದ ಒಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮ ಇದಾಗಿದ್ದು,ಈ ಹಬ್ಬದಲ್ಲಿ ಮಕ್ಕಳು ಆಟಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸ್ವಯಂ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಾರೆ.ಇದನ್ನು ವಿಶೇಷವಾಗಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಚಟುವಟಿಕೆಗಳ ಬಲವರ್ಧನೆಗೆ ಪೂರಕವಾಗಿ,ಕಲಿಕಾ ಚೇತರಿಕೆಯ ಭಾಗವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಗೌಡಸಾಡ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಣೇಶ ಗಾಂವಕರ ರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸಂಜನಾ ಅಟ್ಲೇಕರ,ವಿಲಾಸ ಗಾಂವಕರ ಗ್ರಾಮಪಂಚಾಯತ ಮಾಜಿ ಅಧ್ಯಕ್ಷರು, ಶ್ರೀನಾಥ ಮಳಿಕ ಅನಮೋಡ,ಸರಕಾರಿ ಪ್ರೌಢಶಾಲೆ ಅನಮೋಡದ ಪ್ರಭಾರ ಮುಖ್ಯ ಶಿಕ್ಷಕಿಯಾದ ವಿದ್ಯಾ ಪೂಜಾರ, ಎಸ್ ಡಿ ಅಂಕೋಲೆಕರ ಮುಖ್ಯ ಶಿಕ್ಷಕರು ತಿನೈಘಾಟ ಪ್ರಾಥಮಿಕ ಶಾಲೆ,ಗುರುನಾಥ ಲಮಾಣಿ ಆಡಾಳಿ ಪ್ರಾಥಮಿಕ ಶಾಲೆ, ಅನಿಲ ರಾಠೋಡ ಶಿಂದೋಳಿ ಶಾಲೆ, ನಿವೃತ್ತ ಶಿಕ್ಷಕರಾದ ಸತ್ಯಪ್ಪ ತೋಟಗಿಯವರು,ಗೌಡಸಾಡ ಶಾಲೆಯ ಎಸ್ ಡಿ ಎಂ ಸಿ ಯ ಸರ್ವಸದಸ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಸಹ ಶಿಕ್ಷಕಿಯಾದ ಕಾವ್ಯ ಮಡಿವಾಳ ನಿರ್ವಹಿಸಿ,ಎಲ್ಲರಿಗೂ ವಂದನೆಯನ್ನು ಸಲ್ಲಿಸಿದರು.
