ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ಇಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾಸಲರಾಕ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸನೆ ಶಿಬಿರವನ್ನು ಕಾಮರಾ ಗ್ರಾಮದಲ್ಲಿ ಆಯೋಜಿಸಲಾಗಿತ್ತು .

ಈ ಕಾರ್ಯಕ್ರಮವನ್ನು ಆಕಾಶ್ ಮರ್ಗುಡಿ ಕಮ್ಯೂನಿಟಿ ಹೆಲ್ತ್ ಆಫೀಸರ್ ಮತ್ತು ರಮೇಶ್ ಪೂಜಾರ್ , ಇವರು ಶಿಬಿರದಲ್ಲಿ ಪಾಲ್ಗೊಂಡಿರುವ ಸದಸ್ಯರಿಗೆ ಉಚಿತ ಆರೋಗ್ಯ ತಪಾಸನೆ ಮಾಡಿ ಗುಳಗಿ, ಔಷಧಿಗಳನ್ನು ನೀಡಲಾಯಿತು.

ಈ ಶಿಬಿರದಲ್ಲಿ ಸದಸ್ಯರ ಆರೋಗ್ಯದ ಕುರಿತು ಬಿಪಿ, ಶುಗರ್, ಕೆಮ್ಮು, ಜ್ವರ, ಮಂಗನ ಕಾಯಿಲೆ ಮುಂತಾದ ರೋಗಗಳ ಬಗ್ಗೆ ಚಿಕಿತ್ಸೆ ನೀಡಲಾಯಿತು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಪ್ರಸ್ತಾವಿಕವಾಗಿ ಮಾತನಾಡಿದರು ಮನೋಹರ್ ಚವರಿಯವರ ಕ್ಷೇತ್ರ ಮೇಲ್ವಿಚಾರಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಜೋಯಿಡಾ ಕಾರ್ಯಕ್ರಮವನ್ನು ಆಯೋಜಿಸಿ ವಂದಿಸಿದರು ಆಶಾ ಕಾರ್ಯಕರ್ತೆ ಶ್ರೀಮತಿ ಮುಕ್ತಾಬಾಯಿ ಗವಡೆ ಉಪಸ್ಥಿತರಿದ್ದರು. ಒಟ್ಟು 35 ಫಲಾನುಭವಿಗಳು ಇದರ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ